ದೀಪಾ ಹೊಸ ಪಕ್ಷ ಶಶಿಕಲಾ ವಿರುದ್ದ ಬಂಡಾಯವೆದ್ದಿರುವ ಸೆಲ್ವಂ ಶಕ್ತಿ ಹೆಚ್ಚಿಸುತ್ತದೆ: ಐಯರ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರ ಹೊಸ ಪಕ್ಷ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್...
ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್
ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್
Updated on
ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರ ಹೊಸ ಪಕ್ಷ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್ ಅವರು ಶನಿವಾರ ಹೇಳಿದ್ದಾರೆ. 
ದೀಪಾ ಅವರ ಪಕ್ಷ ಕೇವಲ ಪಕ್ಷವಲ್ಲ. ಇದೊಂದು ಗುಂಪು, ಒಗ್ಗೂಡುವುಕೆ ಹಾಗೂ ಚಳುವಳಿಯಾಗಿದೆ. ಪಕ್ಷದ ತಮಿಳಿನ ಹೆಸರು ಕಚ್ಛಿ ಎಂದು. ಇದು ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರ ಕೈಗಳ ಬಲವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ. 
ದೀಪಾ ಅವರ ಈ ನಿರ್ಧಾತ ಭವಿಷ್ಯದಲ್ಲಿ ತಮಿಳುನಾಡು ಸರ್ಕಾರವನ್ನು ರಕ್ಷಣೆ ಮಾಡಲಿದೆ. ಅಲ್ಲದೆ, ಎಐಎಡಿಎಂಕೆ ಪಕ್ಷವನ್ನೂ ರಕ್ಷಣೆ ಮಾಡಲಿದೆ. ಎಐಎಡಿಎಕೆ ಪಕ್ಷವನ್ನು ಒಡೆಯುವ ಪ್ರಯತ್ನಗಳು ಇದಲ್ಲ ಎಂಬುದು ನನ್ನ ಅನಿಸಿದೆ. ಆಧರೆ, ಹೊಸ ಪಕ್ಷ ಎಐಎಡಿಎಂಕೆ ಹಾಗೂ ತಮಿಳುನಾಡು ಸರ್ಕಾರವನ್ನು ರಕ್ಷಣೆ ಮಾಡಲಿದೆ ಎಂಬುದು ನನ್ನ ಅಭಿಪ್ರಾಯ. 
ಪ್ರಸ್ತುತ ರಾಜ್ಯ ರಾಜಕೀಯದಲ್ಲಿರುವ ಬೆಳವಣಿಗೆಗಳನ್ನು ಗಮನಿಸಿದರೆ, ದೀಪಾ ಅವರ ಪಕ್ಷ ಯಶಸ್ಸು ಗಳಿಸುವ ಅವಕಾಶಗಳಿಗೆ ಎಂದೆನಿಸುತ್ತಿದೆ. ಕೇವಲ 6 ಮಂದಿಯಷ್ಟೇ ಪಳನಿಸ್ವಾಮಿಯವರ ಕೈಬಿಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕೆಳಗೆ ಬೀಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ತಿಳಿಸಿದ್ದಾರೆ. 
ನಿನ್ನೆ ಜಯಲಲಿತಾ ಅವರ ಹುಟ್ಟುದಿನವಾದ್ದರಿಂದ ದೀಪಾ ಜಯಕುಮಾರ್ ಅವರು ಎಂಜಿಆರ್ ಅಮ್ಮ ದೀಪಾ ಪೋರಂ ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದರು. ಜನರ ಒತ್ತಾಯದ ಮೇರೆಗೆ ಅಮ್ಮ ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರದಿಂದಲೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com