ಫರೂಕ್ ಪ್ರತ್ಯೇಕತವಾದಿಗಳ ದನಿ ಎಂಬಂತೆ ಮಾತನಾಡುತ್ತಿದ್ದಾರೆ: ರಕ್ಷಣಾ ತಜ್ಞರು

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರು ಪ್ರತ್ಯೇಕತಾವಾದಿಗಳ ಪರ ದನಿ ಎಂಬಂತೆ ಮಾತನಾಡುತ್ತಿದ್ದಾರೆಂದು ರಕ್ಷಣಾ ತಜ್ಞರು ಶನಿವಾರ...
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ
ನಾಗ್ಪುರ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರು ಪ್ರತ್ಯೇಕತಾವಾದಿಗಳ ಪರ ದನಿ ಎಂಬಂತೆ ಮಾತನಾಡುತ್ತಿದ್ದಾರೆಂದು ರಕ್ಷಣಾ ತಜ್ಞರು ಶನಿವಾರ ಕಿಡಿಕಾರಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ರಕ್ಷಣಾ ತಜ್ಞ ಸುನಿಲ್ ದೇಶಪಾಂಡೆಯವರು, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವ ಸಲುವಾಗಿ ಅಸಂಬದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ. 
ಫರೂಕ್ ಅವರು ಪ್ರತ್ಯೇಕತಾವಾದಿಗಳ ಪರ ದನಿ ಎಂಬಂತೆ ಮಾತನಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಈ ರೀತಿಯ ಹೇಳಿಕೆ ನೀಡುವ ಮನಸ್ಸನ್ನು ಮಾಡಿರಲಿಲ್ಲ. ಇದೀಗ ಅಧಿಕಾರವನ್ನು ಕಳೆದುಕೊಂಡ ಕಾರಣ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳುವ ಸಲುವಾಗಿ ಫರೂಕ್ ಅವರು ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಅಸಂಬದ್ಧರಾಗಿದ್ದರೂ, ತಾವು ಬದ್ಧತೆಯುಳ್ಳು ವ್ಯಕ್ತಿಯಾಗಿದ್ದೇನೆಂದು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. 
ಇದೇ ವೇಳೆ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ಈ ರೀತಿಯ ಹೇಳಿಕೆಗಳಿಂದ ಸೇನಾ ಪಡೆ ಕುಗ್ಗಬಾರದು. ತಲೆ ಕೆಡಿಸಿಕೊಳ್ಳಬಾರದು. ಸೇನಾ ಮುಖ್ಯಸ್ಥರ ನಿರ್ದೇಶನದಂತೆ ಸೇನಾ ಪಡೆ ಎಂದಿನಂತೆ ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಬೇಕು ಎಂದಿದ್ದಾರೆ. 
ನಿನ್ನೆಯಷ್ಟೇ ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ವಿರುದ್ದ ವಾಗ್ದಾಳಿ ನಡೆಸಿದ್ದ ಫರೂಕ್ ಅಬ್ದುಲ್ಲಾ ಅವರು, ಈ ಹಿಂದೆ ಪಿಡಿಪಿ ಕೋಮವಾದಿಗಳ ಪರವಾಗಿ ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿತ್ತು. ಆದರೆ, ಇದೀಗ ಕಾಶ್ಮೀರದಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಕೋಮವಾದಿಗಳೊಂದಿಗಿರುವುದರಿಂದ ಜನತೆ ಅಸಂತುಷ್ಟಗೊಂಡಿದ್ದಾರೆ. ಕಾಶ್ಮೀರದಲ್ಲಿರುವ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದು, ಶಾಸಕರಾಗುವ ಸಲುವಾಗಿ ಅಲ್ಲ, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಇಲ್ಲಿನ ಯುವಕರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com