'ಮನ್ ಕಿ ಬಾತ್': ಇಸ್ರೋ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 
ನವದೆಹಲಿ: ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕೊಂಡಾಡಿದ್ದಾರೆ. 
ರೇಡಿಯೋ ಕಾರ್ಯಕ್ರಮ 29ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ, ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋವನ್ನು ಹಾಡಿ ಹೊಗಳಿದ್ದಾರೆ. 
ವಸಂತ ಋತುವಿನ ಆಗಮನದ ಬಗ್ಗೆ ಸೂಫಿ ಕವಿ ಅಮಿರ್ ಖುರ್ಸೋವ್ ಅವರಮಾತುಗಳನ್ನು ಉಲ್ಲೇಖಿಸುವ ಮೂಲಕ ಪ್ರಧಾನಿ ಮೋದಿಯವರು ತಮ್ಮ ಮನದ ಮಾತುಗಳನ್ನು ಆರಂಭಿಸಿದರು. ಈ ವೇಳೆ ವೈಜ್ಞಾನಿಕ ಲೋಕದಲ್ಲಿ ಭಾರತದ ಸಾಧನೆಗೆ ಅಭಿನಂದಿಸಿದ್ದಾರೆ.
ತಂತ್ರಜ್ಞಾನದಲ್ಲಿ ಭಾರತ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿದೆ. 104 ಉಪಗ್ರಹಗಳನ್ನು ಮಾಡುವ ಮೂಲಸ ಇಸ್ರೋ ಬಹುದೊಡ್ಡ ವಿಶ್ವದಾಖಲೆಯನ್ನು ಮಾಡಿದೆ. ಇದು ದೇಶದ ಹೆಮ್ಮೆಯ ಕ್ಷಣವಾಗಿದೆ. ಇಸ್ರೋ ಸಾಧನೆಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಇಸ್ರೋ ಸಾಧನೆಗೆ ಸಹಾಯ ಮಾಡಿದ ಎಲ್ಲಾ ಮಹಿಳಾ ವಿಜ್ಞಾನಿಗಳಿಗೆ ಅಭಿನಂದನೆಗಳು. ನಮ್ಮ ದೇಶಕ್ಕೆ ವಿಜ್ಞಾನಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 
ತಾಂತ್ರಿಕತೆ ಎಂಬುದು ನಮ್ಮ ಜೀವನದಲ್ಲಿ ವಿಭಾಗಿಸಲಾಗದ ಭಾಗವಾಗಿ ಹೋಗಿದೆ. ಭಾರತದ ಯುವಕರು ಹಾಗೂ ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ್ ರಲ್ಲಿ ವಿಜೇತರಾದವರು ಡಿಜಿಟಲ್ ವ್ಯವಹಾರದ ರಾಯಭಾರಿಯಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಏ.14ರ ಅಂಬೇಡ್ಕರ್ ಜಯಂತಿಯಂದು ಭೀಮ್ ಆ್ಯಪ್ ಹೇಗೆ ಬಳಸುವುದು ಎಂಬುದನ್ನು ಜನರಿಗೆ ಹೇಳಿಕೊಡಿ. ಈ ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಭ್ರಷ್ಟಾಚಾರ ನಿಗ್ರಹ ತಂಡದ ಸದಸ್ಯರೆಂದು ಪರಿಗಣಿಸಲಾಗುವುದು. ಡಿಜಿಟಲ್ ವ್ಯವಹಾರಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದ್ದು ಡಿಜಿಧನ್ ಯೋಜನೆಯಲ್ಲಿ 10 ಲಕ್ಷ ಜನ ಫಲಾನುಭವಿಗಳಾಗಿದ್ದಾರೆ. 
ಮಾರ್ಚ್ 8 ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಕೇವಲ ಸರ್ಕಾರದ ಯೋಜನೆ ಮಾತ್ರ ಆಗಿಲ್ಲ. ಯೋಜನೆ ಇದೀಗ ಸಾರ್ವಜನಿಕ ಶಿಕ್ಷಣ ಅಭಿಯಾನವಾಗಿ ಮಾರ್ಪಟ್ಟಿದೆ. ಯೋಜನೆ ಸಾಮಾಜಿಕ ಬದಲಾವಣೆಗಿರುವ ಯೋಜನೆಯಾಗಿದೆ. ಜನರ ಮನಃಸ್ಥಿತಿಯನ್ನುಬದಲಾಯಿಸುವ ಯೋಜನೆ ಇದಾಗಿದೆ. ಏಷ್ಯನ್ ರಗ್ಬೀ ಸೆವೆನ್ ಟ್ರೋಫಿ ಗೆದ್ದ ಮಹಿಳಾ ತಂಡಕ್ಕೆ ಈ ಮೂಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೂ ಅಂಥರ ಟಿ20 ವಿಶ್ವಕಪ್ ಗೆದ್ದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 
ಇದೇ ವೇಳೆ ಸ್ವಚ್ಛ ಭಾರತದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ಜನರನ್ನು ಶ್ಲಾಘಿಸಿರುವ ಅವರು, ತೆಲಂಗಾಣದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಯಾವ ರೀತಿ ಕ್ಲೀನ್ ಪಿಟ್ ಟಾಯ್ಲೆಟ್ ಬಳಕೆಯ್ನು ಉತ್ತೇಜಿಸಿದರು ಎಂಬುದನ್ನು ವಿವರಿಸಿದರು. ಅಲ್ಲದೆ, ಅಭಿಯಾನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುವಂತೆ ಕರೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com