ಉರಿಯಲ್ಲಿ ಉಗ್ರರ ದಾಳಿಗೆ ಸಹಾಯ ಮಾಡಿದ ಯುವಕರ ಗಡಿಪಾರಿಗೆ ಎನ್ಐಎ ನಿರ್ಧಾರ

ಜಮ್ಮು-ಕಾಶ್ಮೀರದ ಉರಿಯಲ್ಲಿ ಕಳೆದ ವರ್ಷ ಸೇನಾ ಶಿಬಿರದ ಮೇಲೆ ದಾಳಿ ನಡೆಸುವಲ್ಲಿ ಉಗ್ರಗಾಮಿಗಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜಮ್ಮು-ಕಾಶ್ಮೀರದ ಉರಿಯಲ್ಲಿ ಕಳೆದ ವರ್ಷ ಸೇನಾ ಶಿಬಿರದ ಮೇಲೆ ದಾಳಿ ನಡೆಸುವಲ್ಲಿ ಉಗ್ರಗಾಮಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ಪಾಕ್ ಆಕ್ರಮಿತ ಕಾಶ್ಮೀರದ ಯುವಕರಿಗೆ ಸಂಬಂಧಿಸಿದ ಕೇಸಿನ ವಿಚಾರಣೆ ಕುರಿತ ಮುಕ್ತಾಯ ವರದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸದ್ಯದಲ್ಲಿಯೇ ನೀಡಲಿದೆ.
ಫೈಸಲ್ ಹುಸೇನ್ ಮತ್ತು ಅಹ್ಸಾನ್ ಖುರ್ಷೀದ್ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದಿರುವುದರಿಂದ ಅವರನ್ನು ಮತ್ತೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗುತ್ತದೆ.
ಕಳೆದ ವರ್ಷ ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ 19 ಮಂದಿ ಭಾರತೀಯ ಯೋಧರು ಮೃತಪಟ್ಟ ನಂತರ ಮೂರು ದಿನಗಳು ಕಳೆದ ಮೇಲೆ ಇಬ್ಬರು ಯುವಕರನ್ನು ಘಟನೆಗೆ ಸಂಬಂಧಿಸಿ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com