ಶೋಭಾ ಡೇ ವ್ಯಂಗ್ಯವಾಡಿದ್ದ ಸ್ಥೂಲ ಕಾಯದ ಪೊಲೀಸ್ ಗೆ ಮುಂಬೈ ಆಸ್ಪತ್ರೆಯಿಂದ ಸಹಾಯ ಹಸ್ತ

ಟ್ವಿಟರ್ ನಲ್ಲಿ ಅಂಕಣಗಾರ್ತಿ ಶೋಭಾ ಡೇ ಅವರ ವ್ಯಂಗ್ಯಕ್ಕೆ ಗುರಿಯಾಗಿದ್ದ ಸ್ಥೂಲ ಕಾಯದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗವತ್ ಗೆ ಮುಂಬೈ ಆಸ್ಪತ್ರೆಯೊಂದು ನೆರವಿಗೆ ಧಾವಿಸಿದೆ.
ಸ್ಥೂಲ ಕಾಯದ ಪೊಲೀಸ್
ಸ್ಥೂಲ ಕಾಯದ ಪೊಲೀಸ್
ಮುಂಬೈ: ಟ್ವಿಟರ್ ನಲ್ಲಿ ಅಂಕಣಗಾರ್ತಿ ಶೋಭಾ ಡೇ ಅವರ ವ್ಯಂಗ್ಯಕ್ಕೆ ಗುರಿಯಾಗಿದ್ದ ಸ್ಥೂಲ ಕಾಯದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗವತ್ ಗೆ ಮುಂಬೈ ಆಸ್ಪತ್ರೆಯೊಂದು ನೆರವಿಗೆ ಧಾವಿಸಿದ್ದು, ಸ್ಥೂಲ ಕಾಯದ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದೆ. 
ಸೈಫೀ ಆಸ್ಪತ್ರೆಯಲ್ಲಿ ದೌಲತ್ ರಾಮ್ ಜೋಗವತ್ ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗುವ ಚಿಕಿತ್ಸೆ ಪಡೆಯಲು ತಪಾಸಣೆಗೊಳಗಾಗಿದ್ದಾರೆ. ಅಗತ್ಯವಿದ್ದರೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. 
ಸ್ಥೂಲ ಕಾಯ ಉಂಟಾಗಲು ಕಾರಣ ಪತ್ತೆ ಮಾಡಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡುತ್ತೇವೆ. ತಪಾಸಣೆಯ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ತಿಳಿಸಲಿದ್ದೇವೆ ಎಂದು ಸೈಫೀ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  ಸ್ಥೂಲಕಾಯದ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿ ಇಂದು ನಗರದಲ್ಲಿ ಭಾರೀ ಬಂದೋಬಸ್ತ್ ಎಂದು ಕ್ಯಾಪ್ಷನ್ ಹಾಕಿದ್ದರು, ಮೂರು ಗಂಟೆ ಕಳೆದ ನಂತರ ಮುಂಬೈ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಂದ ಪ್ರತಿಕ್ರಿಯೆಯಲ್ಲಿ ''ನಾವು ತಮಾಷೆಯನ್ನು ಇಷ್ಟಪಡುತ್ತೇವೆ ಶೋಭಾ ಡೇಯವರೇ. ಆದರೆ ಇದು ಮಾತ್ರ ಸಂಪೂರ್ಣ ತಪ್ಪು. ಜವಾಬ್ದಾರಿಯುತ ಪ್ರಜೆಗಳಾದ ನಿಮ್ಮಂತವರಿಂದ ನಾವು ಒಳ್ಳೆಯದನ್ನು ನಿರೀಕ್ಷಿಸುತ್ತೇವೆ ಎಂದು ಹೇಳಲಾಗಿತ್ತು. ಸ್ಥೂಲ ಕಾಯ ಹೊಂದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಆರೋಗ್ಯದ ಸಮಸ್ಯೆ ಇದೆ ಎಂದು ನಂತರ ತಿಳಿದುಬಂದಿದ್ದು, ಮುಂಬೈ ಆಸ್ಪತ್ರೆ ನೆರವಿಗೆ ಧಾವಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com