ಪೆಂಟಗನ್
ದೇಶ
ಇಸೀಸ್ ಉಗ್ರ ಸಂಘಟನೆ ನಾಶಕ್ಕೆ ಪೆಂಟಗನ್ ನಿಂದ ಶ್ವೇತ ಭವನಕ್ಕೆ ಯೋಜನೆ ರವಾನೆ
ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ನಾಶ ಮಾಡುವುದಕ್ಕೆ ಸಂಬಂಧಿಸಿದಂತೆ ಪೆಂಟಗನ್ ಶ್ವೇತ ಭವನಕ್ಕೆ ಯೋಜನೆಯನ್ನು ರವಾನೆ ಮಾಡಿದೆ.
ನ್ಯೂಯಾರ್ಕ್: ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ನಾಶ ಮಾಡುವುದಕ್ಕೆ ಸಂಬಂಧಿಸಿದಂತೆ ಪೆಂಟಗನ್ ಶ್ವೇತ ಭವನಕ್ಕೆ ಯೋಜನೆಯನ್ನು ರವಾನೆ ಮಾಡಿದೆ.
ಪೆಂಟಗನ್ ನ ವಕ್ತಾರ ಜೆಫ್ ಡವೀಸ್ ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ನಾಶ ಮಾಡುವುದಕ್ಕೆ ಪ್ರಾಥಮಿಕ ಹಂತದ ಯೋಜನೆಯನ್ನು ಕಳಿಸಿಕೊಡಲಾಗಿದೆ. ಯೋಜನೆಯ ಕರಡನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ ಎಂದು ತಿಳಿಸಿದ್ದಾರೆ. ಇಸೀಸ್ ಉಗ್ರ ಸಂಘಟನೆಯನ್ನು ನಿರ್ನಾಮ ಮಾಡುವುದಕ್ಕೆ ಸಂಬಂಧಿಸಿದಂತೆ ಯೋಜನೆ ತಯಾರಿಸಲು ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದ ಒಂದು ತಿಂಗಳಲ್ಲಿ ಯೋಜನೆ ಸಿದ್ಧಗೊಂಡಿದೆ.
ಒಬಾಮ ಆಡಳಿತ ಇಸೀಸ್ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಡೊನಾಲ್ಡ್ ಟ್ರಂಪ್ ಅನೇಕ ಬಾರಿ ಆರೋಪಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ