ಸಂಪತ್ತು ಸೂಚ್ಯಂಕ: ವಾಷಿಂಗ್ ಟನ್, ಮಾಸ್ಕೋಗಿಂತಲೂ ಮುಂಚೂಣಿಯಲ್ಲಿ ಮುಂಬೈ!

ನಗರ ಸಂಪತ್ತು ಸೂಚಕ್ಯಂಕದಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈ ಅಮೆರಿಕಾದ ವಾಷಿಂಗ್ ಟನ್, ರಷ್ಯಾದ ಮಾಸ್ಕೋಗಿಂತಲೂ ಮುಂಚೂಣಿಯಲ್ಲಿದೆ ಎಂದು ನೈಟ್ ಫ್ರಾಂಕ್ ವೆಲ್ತ್ ರಿಪೋರ್ಟ್ 2017 ತಿಳಿಸಿದೆ.
ಮುಂಬೈ
ಮುಂಬೈ
ಮುಂಬೈ: ನಗರ ಸಂಪತ್ತು ಸೂಚಕ್ಯಂಕದಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈ ಅಮೆರಿಕಾದ ವಾಷಿಂಗ್ ಟನ್, ರಷ್ಯಾದ ಮಾಸ್ಕೋಗಿಂತಲೂ ಮುಂಚೂಣಿಯಲ್ಲಿದೆ ಎಂದು ನೈಟ್ ಫ್ರಾಂಕ್ ವೆಲ್ತ್ ರಿಪೋರ್ಟ್ 2017 ತಿಳಿಸಿದೆ. 
ವಿಶ್ವದ ನಗರಗಳ ಪೈಕಿ ವಾಷಿಂಗ್ ಟನ್ ಗಿಂತ ಮುಂಬೈ ಮುಂಚೂಣಿಯಲ್ಲಿದ್ದರೆ, ದೆಹಲಿ 35 ನೇ ಸ್ಥಾನದಲ್ಲಿದ್ದು, ಬ್ಯಾಂಕಾಕ್, ಸಿಯಾಟಲ್, ಜಕಾರ್ತಾಗಳಿಗಿಂತ ಮುಂಚೂಣಿಯಲ್ಲಿದೆ ಎಂದು ವರದಿ ವಿಶ್ಲೇಷಿಸಿದೆ. 89 ರಾಷ್ಟ್ರಗಳ 125 ನಗರಗಳಲ್ಲಿ ಸೂಪರ್ ಶ್ರೀಮಂತರ ಜನಸಂಖ್ಯೆಯ ಬೆಳವಣಿಯ ಬಗ್ಗೆ ಅಧ್ಯಯನ ನಡೆಸಿದ್ದು, ಮುಂಬೈ ವಾಷಿಂಗ್ ಟನ್ ಗಿಂತಲೂ ಮುಂಚೂಣಿಯಲ್ಲಿದೆ ಎಂದು ವರದಿ ಪ್ರಕಟಿಸಿದೆ. 
ವಿಶ್ವದ ಮುಂಚೂಣಿಯಲ್ಲಿರುವ ಖಾಸಗಿ ಬ್ಯಾಂಕರ್ ಗಳು ಹಾಗೂ ಸಂಪತ್ತು ಸಲಹೆಗಾರರಿಂದ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ ವರದಿ ತಯಾರಿಸಲಾಗಿದ್ದು, ಯುಹೆಚ್ಎನ್ ಡಬ್ಲ್ಯೂಐಎಸ್ ಪ್ರಕಾರ 200 ಕೋಟಿ (30 ಮಿಲಿಯನ್ ಡಾಲರ್) ಆಸುಪಾಸಿನಲ್ಲಿ ಆಸ್ತಿ ಹೊಂದಿರುವ ವ್ಯಕ್ತಿಗಳಿದ್ದಾರೆ. 
ಉಲ್ಟ್ರಾ ಹೈ ನೆಟ್ ವರ್ತ್ ಇಂಡಿವಿಜುವಲ್ಸ್ (ಯುಹೆಚ್ಎನ್ ಡಬ್ಲ್ಯೂಐಎಸ್) ಕಳೆದ 10 ವರ್ಷದ ಅವಧಿಯಲ್ಲಿ ಭಾರತದಲ್ಲಿ  ಶೇ.290 ರಷ್ಟು ಹೆಚ್ಚಾಗಿದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com