ಹೆಣ್ಣುಮಕ್ಕಳು ಜೀನ್ಸ್ ಧರಿಸುವುದರ ಬಗ್ಗೆ ಕೇರಳ ಪಾದ್ರಿ ಅವಹೇಳನಕಾರಿ ಟೀಕೆ: ವಿಡಿಯೋ ವೈರಲ್

ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರರು ಹೆಣ್ಣು ಮಕ್ಕಳು ಜೀನ್ಸ್ ಹಾಕುವುದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರರು ಹೆಣ್ಣು ಮಕ್ಕಳು ಜೀನ್ಸ್ ಹಾಕುವುದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಶಾಲೋಮ್ ಎಂಬ ಕ್ರಿಶ್ಚಿಯನ್ ಭಕ್ತಿ ಚಾನೆಲ್ ನಲ್ಲಿ ಪಾದ್ರಿ ಮಾತನಾಡಿರುವ ವಿಡಿಯೋವನ್ನು ಇಂಟರ್ನೆಟ್ ಗೆ ಅಪ್ಲ ಲೋಡ್ ಮಾಡಲಾಗಿದೆ. ಪವಿತ್ರ ಬೈಬಲ್ ಹಾಗೂ ಕ್ಯಾಥೋಲಿಕ್ ಚರ್ಚ್ ಗಳ ಹೆಣ್ಣು ಮಕ್ಕಳು ಜೀನ್ಸ್ ಮತ್ತು ಟೀ ಶರ್ಟ್ ಧರಿಸಲು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ ಈ ವಿಡಿಯೋದಲ್ಲಿ ಶಾಲೋಮ್ ಟಿವಿಯ ಲೋಗೋ ಸಹ ಇದೆ.ಹೆಣ್ಣು ಮಕ್ಕಳು, ಗಂಡು ಮಕ್ಕಳಂತೆ ಜೀನ್ಸ್ ಮತ್ತು ಶರ್ಟ್ ಧರಿಸುವುದು ಬೈಬಲ್ ಮತ್ತು ಚರ್ಚ್ ನ ತತ್ವಗಳಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳು ಗಂಡು ಮಕ್ಕಳ ಉಡುಪು  ಧರಿಸಬಾರದು, ಗಂಡು ಮಕ್ಕಳು ಮಹಿಳೆಯರ ಉಡುಪು ಧರಿಸಬಾರದು, ಜೀನ್ಸ್ ಪ್ಯಾಂಟ್ , ಟೀಶರ್ಟ್ ಧರಿಸಿ, ಕೈಯ್ಯಲ್ಲಿ ಮೊಬೈಲ್ ಹಿಡಿದು ಚರ್ಚ್ ಗೆ ಬಂಗದು ಸಾಮೂಹಿಕ ಪ್ರಾರ್ಥನೆ ಮಾಡುವುದು ಸರಿಯಲ್ಲ ಎಂದು ಹೇಳಿರುವ ಅವರು ಹೆಣ್ಣುಮಕ್ಕಳು ಗಂಡಸರು ಹಾಕುವ ಉಡುಪು ಧರಿಸಲು ಕ್ಯಾಥೋಲಿಕ್ ಚರ್ಚ್ ಅಥವಾ ಪವಿತ್ರ ಬೈಬಲ್ ಅನುಮತಿ ನೀಡಿದೆಯೆ ಎಂದು ಪ್ರಶ್ನಿಸಿದ್ದಾರೆ. ಪುರುಷರ ಉಡುಪು ಧರಿಸುವ ಮೂಲಕ ಮಹಿಳೆಯರುದೇವರಿಗೆ ಆಗೌರವ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಂಥಹ ಉಡುಪು ಧರಿಸಿದವರ ಬಗ್ಗೆ ಧಾರ್ಮಿಕ ತರಗತಿಗಳಿಗೆ ಹೋಗಿ ಬಂದ ನಂತರ ಕೆಲವು ಯುವಕರು ನನ್ನ ಬಳಿಗೆ ಬಂದು, ಚರ್ಚಿನ ಹೊರಗೆ ನಿಂತಿರುವ ಅರೆನಗ್ನವಾಗಿ ನಿಂತಿರುವ ಮಹಿಳೆ ಸ್ವಯಂಕೃತವಾಗಿ ಪಾಪ ಮಾಡಲು ಮನವೊಲಿಸುತ್ತಿದ್ದಾಳೆ ಎಂದು ಹೇಳಿದರು ಎಂದು ಪಾದ್ರಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸುವ ಯುವತಿಯರ ಕುತ್ತಿಗೆಗೆ ಕಲ್ಲು ಕಟ್ಟಿ ಮುಳುಗಿಸಬೇಕು ಎಂದು ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ

ಈ ಸಂಬಂಧ ಪಾದ್ರಿ ಅವರ ಕಚೇರಿ ಸಂಪರ್ಕಿಸಿದರೇ, ನಾವು ಇಂತಹ ಯಾವುದೇ ವಿಡಿಯೋವನ್ನು ನೋಡಿಲ್ಲ,ಯಾವುದೋ ಪಟ್ಟಭದ್ರ ಹಿತಾಸಕ್ತಿಗಳು ಎಡಿಟ್ ಮಾಡಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ಒಂದು ವರ್ಷ ಹಳೆಯದ್ದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com