ತಮಿಳುನಾಡಿನಲ್ಲಿ ಇಂದಿನಿಂದ ಪೆಪ್ಸಿ- ಕೋಕಾಕೋಲಾ ಮಾರಾಟ ಸ್ಥಗಿತ

ಇಂದಿನಿಂದ ತಮಿಳುನಾಡಿನಲ್ಲಿ ಪ್ರಸಿದ್ಧ ಅಂತಾರರಾಷ್ಟ್ರೀಯ ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಇಂದಿನಿಂದ ತಮಿಳುನಾಡಿನಲ್ಲಿ ಪ್ರಸಿದ್ಧ ಅಂತಾರರಾಷ್ಟ್ರೀಯ ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟ ಸ್ಥಗಿತವಾಗಿದೆ.

ಜಲ್ಲಿಕಟ್ಟು ಬ್ಯಾನ್ ವಿರೋಧಿಸಿ ಭಾರೀ ಪ್ರತಿಭಟನೆ ಉಂಟಾದ ಬೆನ್ನಲ್ಲೇ ವಿದೇಶಿ ಪಾನೀಯಗಳ ವಿರುದ್ಧ ಅಲ್ಲಿನ ಜನ ಸಮರ ಸಾರಿದ್ದಾರೆ. ಇಂದಿನಿಂದಲೇ ಕೋಕ್ ಕೋಲಾ, ಪೆಪ್ಸಿ ಸೇರಿದಂತೆ ವಿದೇಶಿ ತಂಪು ಪಾನೀಯಗಳನ್ನು ಮಾರಾಟ ಮಾಡದಿರಲು ವ್ಯಾಪಾರಿ ಸಂಘಟನೆಗಳು ನಿರ್ಧರಿಸಿವೆ. ಈ ಮಧ್ಯೆ ಈಗಾಗಲೇ ತಮಿಳುನಾಡಿನಲ್ಲಿ ವಿದೇಶಿ ಪಾನೀಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದ್ದರಿಂದ ಭಾರೀ ಪ್ರಮಾಣದಲ್ಲಿ ಪಾನೀಯಗಳ ಮಾರಾಟ ಇಳಿಕೆಯಾಗಿದೆ ಎನ್ನಲಾಗಿದೆ.

ನಾವು ಪೆಪ್ಸಿ ಕೋಕಕೋಲಾ ಮಾರಾಟ ಮಾಡದಿರುವ ಕ್ರಮಕ್ಕೆ ಬೆಂಬಲ ಸೂಚಿಸಿದ್ದೇವೆ. ಹೀಗಾಗಿ ಹೊಸದಾಗಿ ಈ ಪಾನೀಯಗಳಿಗಾಗಿ ಆರ್ಡರ್ ನೀಡಿಲ್ಲ ಎಂದು ಕೊಯಂಬೇಡೂ ಸೂಪರ್ ಸ್ಟೋರ್ ಮಾಲೀಕ ತಿಳಿಸಿದ್ದಾರೆ. ಈ ಮೊದಲು ಪ್ರತಿದಿನ 50ರಿಂದ 60 ಬಾಟಲ್ ಗಳು ಮಾರಾಟವಾಗುತ್ತಿತ್ತು. ಈಗ ತೀರಾ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

ತಮಿಳುನಾಡಿನ ಪ್ರಮುಖ ವ್ಯಾಪಾರಿ ಸಂಘಟನೆಗಳಾದ ವನಿಗರ್ ಸಂಗಂಗಲಿನ್ ಪೆರವವೈ ಹಾಗೂ ಸಂಗಂಗಲಿನ್ ಪೆರಮಿಪ್ಪು ಮಾರ್ಚ್ 1 ರಿಂದ ಪಾನೀಯ ಮಾರಾಟ ಮಾಡದಿರಲು ನಿರ್ಧರಿಸಿದ್ದವು.

ಪೆಪ್ಸಿ ಕೋಕಾಕೋಲಾ ಮಾರಾಟ ಸ್ಥಗಿತಗೊಂಡಿರುವುದರಿಂದ ಗೃಹ ಉತ್ಪನ್ನ ಪಾನೀಯಗಳು ಹಾಗೂ ಎಳನೀರು ಸೇರಿದಂತೆ ನೈಸರ್ಗಿಕ ಪಾನೀಗಳ ಮಾರಾಟ ಜೋರಾಗಿದೆ. ಈ ಮೊದಲು ತಮಿಳುನಾಡಿನಲ್ಲಿ ಪ್ರತಿದಿನ 10000 ಬಾಕ್ಸ್ ಪೆಪ್ಸಿ, ಕೋಕ್ ಸೇಲ್ ಆಗುತ್ತಿತ್ತು. ಆದರೆ ಇದೀಗ 5500 ಬಾಕ್ಸ್ ಮಾತ್ರ ಮಾರಾಟವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ, ಜನ ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com