ನವದೆಹಲಿ: ಕೇಂದ್ರ ಲೋಕಸೇವಾ ಆಯೋಗಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಡೇವಿಡ್ ಆರ್ ಸಯೀಮ್ಲೆ ಅವರನ್ನು ನೇಮಕ ಮಾಡಿದ್ದಾರೆ.
ಮೇಘಾಲಯ ಮೂಲದವರಾಗಿರುವ ಡೇವಿಡ್ ಆರ್ ಸಯೀಮ್ಲೆ, ಲೋಕಸೇವಾ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಡೇವಿಡ್ ಸಯೀಮ್ಲೆ ಅವರನ್ನು ನೇಮಕ ಮಾಡಿರುವುದರ ಬಗ್ಗೆ ಯುಪಿಎಸ್ ಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಯುಪಿಎಸ್ ಸಿ ಅಧ್ಯಕ್ಷರಾಗಿ ಡೇವಿಡ್ ಜ.4 ರಂದು ಅಧಿಕಾರ ವಹಿಸಿಕೊಳ್ಳಲಿದ್ದು 2018 ರ ಜ.21 ಕ್ಕೆ ನಿವೃತ್ತರಾಗಲಿದ್ದಾರೆ.