ಇಂದು ಲಖನೌನಲ್ಲಿ ಪರಿವರ್ತನ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಹಿಂದುಸ್ಥಾನದ ಭಾಗ್ಯವನ್ನು ಬದಲಾಯಿಸಲು ನಾವು ಮೊದಲು ಉತ್ತರ ಪ್ರದೇಶದ ಭಾಗ್ಯವನ್ನು ಬದಲಾಯಿಸಬೇಕು. ಆದರೆ ಉತ್ತರ ಪ್ರದೇಶ 14 ವರ್ಷಗಳಿಂದ ಅಭಿವೃದ್ಧಿಯ ವನವಾಸವನ್ನು ಅನುಭವಿಸುತ್ತಿದೆ. ಕೆಲವರು ಬಿಜೆಪಿ 14 ವರ್ಷಗಳ ವನವಾಸ ಅಂತ್ಯಗೊಳ್ಳುತ್ತದೆ ಎನ್ನುತ್ತಿದ್ದಾರೆ. ಆದರೆ ಇದು ಬಿಜೆಪಿಯ ವನವಾಸವಲ್ಲ, ಉತ್ತರ ಪ್ರದೇಶದ ಅಭಿವೃದ್ಧಿಯ ವನವಾಸ ಎಂದರು. ಅಲ್ಲದೆ ರಾಜ್ಯದ ಅಭಿವೃದ್ಧಿಗಾಗಿ ಜಾತಿ, ಧರ್ಮ ಬದಿಗಿಟ್ಟು ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿದರು.