ಸಮಾಜವಾದಿ ಪಕ್ಷದಲ್ಲಿನ ವೈರತ್ವ ಮಹಾಭಾರತವನ್ನು ನೆನಪಿಸುತ್ತಿದೆ: ಸುಬ್ರಮಣಿಯನ್ ಸ್ವಾಮಿ

ಸಮಾಜವಾದಿ ಪಕ್ಷದ ಒಳಗೆ ನಡೆಸುತ್ತಿರುವ ಘರ್ಷಣೆ ಹಾಗೂ ಒಡಕು ನಿಜಕ್ಕೂ ದುರಾದೃಷ್ಟಕರ. ಸಮಾಜವಾದಿ ಪಕ್ಷದಲ್ಲಿನ ವೈರತ್ವದ ಮಹಾಭಾರತವನ್ನು ನೆನಪಿಸುತ್ತಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ...
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಸಮಾಜವಾದಿ ಪಕ್ಷದ ಒಳಗೆ ನಡೆಸುತ್ತಿರುವ ಘರ್ಷಣೆ ಹಾಗೂ ಒಡಕು ನಿಜಕ್ಕೂ ದುರಾದೃಷ್ಟಕರ. ಸಮಾಜವಾದಿ ಪಕ್ಷದಲ್ಲಿನ ವೈರತ್ವದ ಮಹಾಭಾರತವನ್ನು ನೆನಪಿಸುತ್ತಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿರುಕು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಮಾಜವಾದಿ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯನ್ನು ನೋಡಿದರೂ ದುರಾದೃಷ್ಟಕರ ಎನಿಸುತ್ತದೆ. ಪ್ರಸ್ತುತ ಬೆಳವಣಿಗೆಗಳನ್ನು ನೋಡಿದರೆ ಗೆಲವು ಸಾಧಿಸಿದ ಬಳಿಕ ಯಾಧವರು ದ್ವಾರಕದಲ್ಲಿ ನಡೆದುಕೊಂಡ ರೀತಿಯನ್ನು ನೆನಪಿಸುತ್ತದೆ.

ಮುಲಾಯಂ ಸಿಂಗ್ ಅವರು ನನಗೆ ಬಹಳ ಆತ್ಮೀಯವಾದ ವ್ಯಕ್ತಿಯಾಗಿದ್ದು, ಅಖಿಲೇಖ್ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಆತ ನನಗೆ ಗೊತ್ತಿದ್ದಾನೆ. ನಿಜ ಹೇಳಬೇಕೆಂದರೆ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ದುರಾದೃಷ್ಟಕರ, ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿ ಉಂಟಾಗಿರುವ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿ ಎಂದು ಆಶಿಸುತ್ತೇನೆ. ಯುವ ಜನರ ಬೆಂಬಲ ಅಖಿಲೇಶ್'ಗೆ ಧನಾತ್ಮಕ ಫಲವನ್ನು ನೀಡಲಿದೆ. ಸಾರ್ವಜನಿಕರು ಅಖಿಲೇಶ್ ಅವರಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ಇದೇ ಚುನಾವಣಾ ಚಿಹ್ನೆ ವಿವಾದ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ಈ ವಿಚಾರ ಬಗೆಹರಿಯಲು ಕನಿಷ್ಟ ಎಂದರೂ 6 ತಿಂಗಳಾದರೂಬೇಕಾಗುತ್ತದೆ. ಸುಪ್ರೀಂಕೋರ್ಟ್ ಪಕ್ಷದ ಕುರಿತ ದಾಖಲೆಗಳು, ಸದಸ್ಯರ ಪಟ್ಟಿಗಳನ್ನು ಕೇಳಲಿದೆ. ಪ್ರಸ್ತುತ ಇರುವ ಚಿಹ್ನೆಗೆ ಸುಪ್ರೀಂಕೋರ್ಟ್ ತಡೆ ಹೇರಬಹುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com