ನಿನ್ನೆಯಷ್ಟೇ ತಮಿಳುನಾಡು ಕಂದಾಯ ಸಚಿವ ಆರ್.ಬಿ .ಉದಯ್ ಕುಮಾರ್ ಅವರು ಶಶಿಕಲಾ ಮುಖ್ಯಮಂತ್ರಿಯಾಗಲಿ ಎಂದು ಮನವಿ ಮಾಡಿದ್ದರು. ಎಐಎಡಿಎಂಕೆಯ ಸಂಸದೀಯ ಪಕ್ಷದ ನಾಯಕ ಹಾಗೂ ಲೋಕಸಭೆ ಉಪ ಸಭಾಪತಿ ಎಂ.ತಂಬಿದೊರೈ ಅವರು ಇಂದು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ಶಶಿಕಲಾ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.