ಕೋಲ್ಕತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತೃಣಮೂಲ ಕಾಂಗ್ರೆಸ್ ನ ಮತ್ತೊಬ್ಬ ಸಂಸದ ಸುದೀಪ್ ಬಂಡೋಪಧ್ಯಾಯ ಅವರನ್ನು ಮಂಗಳವಾರ ಬಂಧಿಸಿದೆ.
ಇದೆ ಪ್ರಕರಣ ಸಂಬಂಧ ಡಿಸೆಂಬರ್ 3ರಂದು ಟಿಎಂಸಿ ಸಂಸದ ತಪಸ್ ಪಾಲ್ ಅವರನ್ನು ಬಂಧಿಸಿದ್ದ ಸಿಬಿಐ ಇಂದು ಸಿಬಿಐ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೀಯ ನಾಯಕ ಸುದೀಪ್ ಬಂಡೋಪಧ್ಯಾಯ ಅವರನ್ನು ವಶಕ್ಕೆ ಪಡೆದಿದೆ.
ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಬಂಡೋಪಧ್ಯಾಯ ಅವರಿಗೆ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಮೂರನೇ ಬಾರಿ ವಿಚಾರಣೆಗೆ ಆಗಮಿಸಿದ ಟಿಎಂಸಿ ನಾಯಕನನ್ನು ಸುಮಾರು 4 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದೆ.
ಕಳೆದ ಶುಕ್ರವಾರ ಬಂಧನಕ್ಕೊಳಗಾಗಿದ್ದ ತಪಸ್ ಪಾಲ್ ಅವರು ಸದ್ಯ ಸಿಬಿಐ ವಶದಲ್ಲಿದ್ದಾರೆ.