ಟಿಎಂಸಿ ಸಂಸದ ಸುದಿಪ್ ಬಂಡೋಪಾಧ್ಯಾಯ
ದೇಶ
ಸಿಬಿಐ ವಿರುದ್ಧ ದೂರು ದಾಖಲಿಸಿದ ಸುದಿಪ್ ಬಂಡೋಪಾಧ್ಯಾಯ ಪತ್ನಿ ನೈನಾ ಮತ್ತು ಟಿಎಂಸಿ ನಾಯಕ
ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಪತಿಯನ್ನು ಬಂಧಿಸುವುದಕ್ಕೂ...
ಕೋಲ್ಕತ್ತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಪತಿಯನ್ನು ಬಂಧಿಸುವುದಕ್ಕೂ ಮುನ್ನ ನಮಗೆ ಮಾಹಿತಿ ನೀಡಿರಲಿಲ್ಲ ಎಂದು ಸುದಿಪ್ ಬಂಡೋಪಾಧ್ಯಾಯ ಅವರ ಪತ್ನಿ ನೈನಾ ಆರೋಪಿಸಿದ್ದು, ಈ ಸಂಬಂಧ ಸಿಬಿಐ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.
ಬಿದಾನ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ತಮ್ಮ ಪತಿಯನ್ನು ಕರೆದೊಯ್ಯುವ ಮುನ್ನ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಯಾರಿಗೂ ಹೇಳಿರಲಿಲ್ಲ ಎಂದು ದೂರಿದ್ದಾರೆ.
ಈ ಮಧ್ಯೆ ಸುದಿಪ್ ಅವರ ಪರ ವಕೀಲ ರಾಜ್ ದೀಪ್ ಮಜುಂದಾರ್ ಇಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಟಿಎಂಸಿ ಸಂಸದ ಸುದಿಪ್ ವಿರುದ್ಧ ಮಾಡುತ್ತಿರುವ ಆರೋಪಗಳು ಸಂಪೂರ್ಣ ಆಧಾರರಹಿತವಾಗಿದೆ. ಇದುವರೆಗೆ ಅವರ ವಿರುದ್ಧ ಸಾಕ್ಷಿಗಳಿಲ್ಲ. ಬಂಧನವಾಗಿರುವ ಅವರ ಬಿಡುಗಡೆಗೆ ನಾವು ಜಾಮೀನು ಕೋರುತ್ತೇವೆ. ಬಂಡೊಪಾಧ್ಯಾಯ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನ್ಯಾಯಾಲಯಕ್ಕೆ ನಾವು ವೈದ್ಯಕೀಯ ದಾಖಲೆಗಳನ್ನು ನೀಡುತ್ತೇವೆ ಎಂದರು.
ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್ ನಾಯಕ ಚಂದ್ರಿಮಾ ಭಟ್ಟಾಚಾರ್ಯ, ಸುದಿಪ್ ಬಂಡೊಪಾಧ್ಯಾಯ ಬಂಧನಕ್ಕೆ ಸಂಬಂಧಪಟ್ಟಂತೆ ಸಿಬಿಐ ವಿರುದ್ಧ ದೂರು ದಾಖಲಿಸಿದೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ