ದಟ್ಟ ಮಂಜಿಗೆ ಉತ್ತರ ಭಾರತ ತತ್ತರ: 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ

ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ನಿರ್ಮಾಣಗೊಂಡಿದ್ದು, ಮಂಜು ಕವಿದ ವಾತಾವರಣದಿಂದಾಗಿ 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ 7 ರೈಲುಗಳ ಸಂಚಾರವನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ನಿರ್ಮಾಣಗೊಂಡಿದ್ದು, ಮಂಜು ಕವಿದ ವಾತಾವರಣದಿಂದಾಗಿ 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ 7 ರೈಲುಗಳ ಸಂಚಾರವನ್ನು ರದ್ದು ಮಾಡಿರುವುದಾಗಿ ಗುರುವಾರ ತಿಳಿದುಬಂದಿದೆ.

ಉತ್ತರ ಭಾರತ ರೈಲ್ವೆ ವಿಭಾಗ ನೀಡಿರುವ ಮಾಹಿತಿ ಪ್ರಕಾರ, ಸಂಪೂರ್ಣ ಕ್ರಾಂತಿ ಎಕ್ರೆಪ್ರೆಸ್ ರೈಲು ವೇಳಾಪಟ್ಚಿಯಲ್ಲಿ ನೀಡಲಾದ ಸಮಯದ ನಂತರ 26 ಗಂಟೆಗಳ ಬಳಿಕ ಸಂಚಾರ ಮಾಡುತ್ತಿದೆ. ಭಾಗಲ್ಪುರ-ಆನಂದ್ ವಿಹಾರ್ ಗರೀಬ್ ನಾಥ್, ಭಾಗಲ್ಪುರ-ನವದೆಹಲಿ ವಿಕ್ರಂಶೀಲಾ ಎಕ್ಸ್ ಪ್ರೆಸ್ 23 ಗಂಟೆಗಳ ಕಾಲ ತಡವಾಗಿ ಪ್ರಯಾಣ ಮಾಡಲಿದೆ ಹಾಗೂ ವೈಶಾಲಿ ಎಕ್ಸ್ ಪ್ರೆಸ್ ರೈಲು 25 ಗಂಟೆಗಳ ಬಳಿಕ ಸಂಚಾರ ಆರಂಭ ಮಾಡಿತ್ತು ಎಂದು ಹೇಳಿದೆ.

ಇದಲ್ಲದೆ, 22 ರೈಲುಗಳ ಸಂಚಾರಗಳ ವೇಳಾಪಟ್ಟಿಯನ್ನು ಬದಲು ಮಾಡಲಾಗಿದ್ದು, ದೆಹಲಿ-ಮಾಲ್ಡಾ ಟೌನ್ ಫರಕ್ಕಾ ಎಕ್ಸ್ ಪ್ರೆಸ್, ನವದೆಹಲಿ-ಪ್ರೂರಿ ಎಕ್ಸ್ ಪ್ರೆಸ್, ಫಿರೋಜ್ಪುರ್ ಕಾಂಟ್-ದೆಹಲಿ ಸರಾಯ್ ರೊಹಿಲ್ಲಾ ಇಂಟರ್ ಸಿಟಿ ಎಕ್ಸ್ ಪ್ರೆಸ್, ನವದೆಹಲಿ-ರಾಜೇಂದ್ರ ನಗರ್ ಸಂಪೂರ್ಣ ಕ್ರಾಂತಿ ಎಕ್ಸೆಪ್ರೆಸ್, ಬಹಿಬ್ಗಂಜ್ ಶತಾಬ್ದಿ ಮತ್ತು ಲಖನೌ ಸ್ವರನ್ ಶತಾಬ್ದಿ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com