ಪಂಜಾಬ್ ನಲ್ಲಿ ಮೊದಲ ಬಾರಿಗೆ ಮತಗಳ ಮುದ್ರಿತ ದಾಖಲೆ

ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕಗಳನ್ನು...
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅವರ ಪುತ್ರ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್(ಸಂಗ್ರಹ ಚಿತ್ರ)
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅವರ ಪುತ್ರ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್(ಸಂಗ್ರಹ ಚಿತ್ರ)
ಚಂಡೀಗಢ: ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿದ ನಂತರ ಪಂಜಾಬ್ ಮುಖ್ಯ ಚುನಾವಣಾಧಿಕಾರಿ ನೀತಿ ಸಂಹಿತೆ ಘೋಷಿಸಿದ್ದಾರೆ. 
ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ಚುನಾವಣಾಧಿಕಾರಿ ವಿ.ಕೆ.ಸಿಂಗ್, ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದಾರೆ.ಸುಮಾರು 5,000 ಅರೆ ಸೇನಾಪಡೆಯ ಪೊಲೀಸ್ ಸಿಬ್ಬಂದಿ ರಾಜ್ಯವನ್ನು  ತಲುಪಿದ್ದು ಇನ್ನೂ 50 ತುಕಡಿಗಳು ಬರುವ ನಿರೀಕ್ಷೆಯಿದೆ. ಜಾಹಿರಾತುಗಳಿಂದ ಎಲ್ಲಾ ರಾಜಕೀಯ ನಾಯಕರ ಫೋಟೋಗಳನ್ನು ತೆಗೆಯುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. 
ಇದೇ ಮೊದಲ ಬಾರಿಗೆ ಪಂಜಾಬ್ ನಲ್ಲಿ 35 ಅತಿ ಉನ್ನತ ಮತ್ತು ಸೂಕ್ಷ್ಮ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮತದಾರರ ಪರಿಶೀಲನಾ ಪೇಪರ್ ಆಡಿಟ್ ಟ್ರಯಲ್ ಜೊತೆ ಲಗತ್ತಿಸಲಾಗಿದೆ. ಇದರಲ್ಲಿ ಮತದಾರರು ಹಾಕುವ ಪ್ರತಿ ಮತಗಳು ಮುದ್ರಿತ ದಾಖಲೆಗಳಾಗುತ್ತವೆ. ಸಮಾಧಾನ್ ಮತ್ತು ಸುವಿದಾ ಆಪ್ ಗಳನ್ನು ಆರಂಭಿಸಲಾಗಿದೆ.
ಸಮಾಧಾನ್ ನಲ್ಲಿ ದಾಖಲಾದ ದೂರುಗಳನ್ನು 24 ಗಂಟೆಗಳೊಳಗೆ ಪರಿಹರಿಸಲಾಗುತ್ತದೆ. ಸುವಿದಾದಲ್ಲಿ ಅಭ್ಯರ್ಥಿಗಳು ರ್ಯಾಲಿ ನಡೆಸಲು ಅನುಮತಿಯನ್ನು ಹೆಸರು ದಾಖಲಿಸಿ 24 ಗಂಟೆಗಳೊಳಗೆ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com