ತುಂಡುಡುಗೆ ಧರಿಸಲು ಅವಕಾಶ ನೀಡಿದರೆ ಮಹಿಳೆಯರಿಗೆ ಅಗೌರವ ತೋರಿದಂತೆ: ಅಬು ಅಜ್ಮಿ

ತುಂಡು ಬಟ್ಟೆ ಧರಿಸಲು ಜನ ಅವಕಾಶ ನೀಡಿದರೇ ಅದು ಮಹಿಳೆಯರಿಗೆ ಅಗೌರವ ತೋರಿಸಿದಂತೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ.
ಅಬು ಅಜ್ಮಿ
ಅಬು ಅಜ್ಮಿ

ನವದೆಹಲಿ:  ತುಂಡು ಬಟ್ಟೆ ಧರಿಸಲು ಜನ ಅವಕಾಶ ನೀಡಿದರೇ ಅದು ಮಹಿಳೆಯರಿಗೆ ಅಗೌರವ ತೋರಿಸಿದಂತೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ ಅಭಿಪ್ರಾಯ ಪಟ್ಟಿದ್ದಾರೆ.

ನಾನು ಮಹಿಳೆಯರನ್ನು ಯಾವತ್ತೂ ಅಗೌರವದಿಂದ ನೋಡುವುದಿಲ್ಲ, ಆದರೆ ಯಾರು ತುಂಡು ಬಟ್ಟೆಗಳನ್ನು ಧರಿಸುತ್ತಾರೋ ಅವರಿಗೆ ನಾನು ಗೌರವ ಕೊಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಸರಿಯಾದ ರೀತಿಯಲ್ಲಿ ಬಟ್ಟೆ ಹಾಕಿಕೊಳ್ಳುವುದು ನಮ್ಮ ಸಂಪ್ರದಾಯ, ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸುವ ಮೂಲಕ, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿರುವ ಅವರು, ಲಿವ್ ಇನ್ ರಿಲೇಷನ್ ಶಿಪ್ ಸಂಬಂಧ ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು, ಮದುವೆಯ ನಂತರವಷ್ಟೇ ಸ್ತ್ರೀಯೋಬ್ಬಳು ಪುರುಷನ ಜೊತೆ ಇರಲು ಸಾಧ್ಯ ಎಂದು ಹೇಳಿದ್ದಾರೆ.

ಬೆಂಗಳೂರು ಸಾಮೂಹಿಕ ಲೈಂಗಿಕ ದೌರ್ಜನ್ಯದ ಬಗ್ಗೆ ತಾವು ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ. ಟಿಆರ್ ಪಿ ಗಾಗಿ ನನ್ನ ಹೇಳಿಕೆಯನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com