ಅನ್ಯಜಾತಿ ಯುವಕನೊಂದಿಗೆ ಮದುವೆ: ರೊಹ್ಟಕ್'ನಲ್ಲಿ ಮರ್ಯಾದಾ ಹತ್ಯೆ

ಅನ್ಯಜಾತಿ ಯುವಕನನ್ನು ಪ್ರೀತಿಸಿ ಕುಟುಂಬಕ್ಕೆ ವಿರೋಧದ ನಡುವೆಯೂ ಮದುವೆಯಾದ ಕಾರಣಕ್ಕೆ ಯುವತಿಯನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆಯೊಂದು ಹರಿಯಾಣದ ರೊಹ್ಟಕ್ ನಲ್ಲಿ ನಡೆದಿದೆ...
ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪುಷ್ಟ ಖಾಟ್ರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು
ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪುಷ್ಟ ಖಾಟ್ರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು

ರೊಹ್ಟಕ್: ಅನ್ಯಜಾತಿ ಯುವಕನನ್ನು ಪ್ರೀತಿಸಿ ಕುಟುಂಬಕ್ಕೆ ವಿರೋಧದ ನಡುವೆಯೂ ಮದುವೆಯಾದ ಕಾರಣಕ್ಕೆ ಯುವತಿಯನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆಯೊಂದು ಹರಿಯಾಣದ ರೊಹ್ಟಕ್ ನಲ್ಲಿ ನಡೆದಿದೆ.

ಸೀಮಾ (20)  ಹತ್ಯೆಯಾದ ಯುವತಿಯಾಗಿದ್ದಾಳೆ. ಅನ್ಯಜಾತಿಯ ಯುವಕನಾಗಿದ್ದ ಪ್ರದೀಪ್ (28) ಎಂಬುವವನನ್ನು ಹಲವು ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಸೀಮಾ, ಕಳೆದ ಡಿಸೆಂಬರ್ 21 ರಂದು ಕುಟುಂಬದ ವಿರೋಧದ ನಡುವೆಯೂ ವಿವಾಹವಾಗಿದ್ದಳು.

ಮದುವೆಗೆ ಸೀಮಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಮದುವೆಯಾಗ ಬಳಿ ಪತ್ನಿಯೊಂದಿಗೆ ಅಮೃತ್ ಕಾಲೋನಿಯಲ್ಲಿ ವಾಸವಿದ್ದೆ. ಕೆಲಸ ದಿನಗಳ ಬಳಿಕ ಸೀಮಾ ಕುಟುಂಬಸ್ಥರು ಮದುವೆಯನ್ನು ಒಪ್ಪಿಕೊಳ್ಳುತ್ತೇವೆ. ಮತ್ತೆ ಸಂಪ್ರದಾಯದಂತೆ ಮದುವೆ ಮಾಡುತ್ತೇವೆಂದು ಹೇಳಿ ಸೀಮಾಳನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ಇದಾದ ಮರುದಿನವೇ ಸೀಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬ ಸುದ್ದಿ ತಿಳಿಯಿತು. ಮನೆಯ ಹತ್ತಿರ ಹೋದಾಗ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿರುವ ವಿಚಾರ ತಿಳಿಯಿತು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಸೀಮಾ ಪತಿ ಪ್ರದೀಪ್ ಅವರು ಹೇಳಿಕೊಂಡಿದ್ದಾರೆ.

ಕೂಡಲೇ ಡಿಎಸ್ ಪಿ ಪುಷ್ಪ ಅವರು ಸ್ಥಳಕ್ಕಾಗಮಿಸಿದ್ದರು. ಈ ವೇಳೆ ಮೃತದೇಹವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೀಮಾಳನ್ನು ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ರೊಹ್ಟಕ್ ನಲ್ಲಿ ಮಹಿಳೆಯೊಬ್ಬರು ಹತ್ಯೆಯಾಗಿರುವುದಾಗಿ ಮಾಹಿತಿ ತಿಳಿಯಿತು. ತನಿಖೆ ವೇಳೆ ದಂಪತಿಗಳು ಅಂತರ್ ಜಾತಿ ವಿವಾಹವಾಗಿರುವುದು ತಿಳಿಯಿತು. ಪ್ರದೀಪ್ ಅವರು ಪತ್ನಿಯನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಹೇಳುತ್ತಿದ್ದರು. ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣವೊಂದು ಮರ್ಯಾದಾ ಹತ್ಯೆಯೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪುಷ್ಪ ಖಾಟ್ರಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com