ಒಂಟಿ ಮಹಿಳೆಯರಿಗೆ ಮಾಸಿಕ ಪಿಂಚಣಿ: ತೆಲಂಗಾಣ ಸರ್ಕಾರದ ಹೊಸ ಯೋಜನೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಜಾರಿಗೆ ತಂದಿರುವ ಒಂಟಿ ಮಹಿಳೆಯರಿಗೆ ಮಾಸಿಕ ವೇತನ ನೀಡುವ ಹೊಸ ಯೋಜನೆಗೆ ವಿವಿಧ ಜಿಲ್ಲೆಗಳಿಂದ ...
ಕೆ.ಚಂದ್ರಶೇಖರ್ ರಾವ್
ಕೆ.ಚಂದ್ರಶೇಖರ್ ರಾವ್

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಜಾರಿಗೆ ತಂದಿರುವ ಒಂಟಿ ಮಹಿಳೆಯರಿಗೆ ಮಾಸಿಕ ವೇತನ ನೀಡುವ ಹೊಸ ಯೋಜನೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ಅಭಿನಂದನೆ ಸಲ್ಲಿಸಿದ್ದಾರೆ.

ಹೈದರಾಬಾದ್ ನ ಪ್ರಗತಿ ಭವನದಲ್ಲಿ ಭೇಟಿ ಸಿಎಂ ಅವರನ್ನು ಭೇಟಿ ಮಾಡಿದ ಮಹಿಳೆಯರು, ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಯೋಜನೆ ಸರಿಯಾಗಿ ತಲುಪುತ್ತಿದೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮಹಿಳೆಯರ ಬಳಿ ಪ್ರಶ್ನಿಸಿ ಮಾಹಿತಿ ಪಡೆದು ಕೊಂಡಿದ್ದಾರೆ.

ಮಹಿಳೆಯರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಚಂದ್ರಶೇಖರ್ ರಾವ್ ಪ್ರತಿ ತಿಂಗಳು ಒಂಟಿ ಮಹಿಳೆಯರಿಗೆ ಒಂದು ಸಾವಿರ ರೂ ಪಿಂಚಣಿ ನೀಡುವುದಾಗಿ ಘೋಷಿಸಿದ್ದಾರೆ.

ಅಸಹಾಯಕ, ಒಂಟಿ ಮಹಿಳೆಯರಿಗೆ ಸಹಾಯವಾಗಲಿ ಮತ್ತು ಸುರಕ್ಷತೆ ಕಂಡುಕೊಳ್ಳಲಿ ಎಂಬ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಈ ಯೋಜನೆ ಜಾರಿಯಾಗಲಿದೆ. ಪ್ರತಿ ಜಿಲ್ಲೆಯಲ್ಲಿರುವ ಎಲ್ಲಾ ಒಂಟಿ ಮಹಿಳೆಯರ ಹೆಸರನ್ನು ನೋಂದಾಯಿಸಿಕೊಳ್ಳಲು ಆಯಾಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com