ಮೋದಿ ವಿರುದ್ಧ ರಾಹುಲ್ ಹೇಳಿಕೆ ಅವರ ತೊಳಲಾಟ ತೋರಿಸುತ್ತದೆ: ಸ್ಮೃತಿ ಇರಾನಿ

ಪ್ರಧಾನಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆ ಮೋದಿಯವರ ಬಗ್ಗೆ ಅವರಲ್ಲಿರುವ ತೊಳಲಾಟವನ್ನು ತೋರಿಸುತ್ತದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು...
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ

ಗಾಂಧಿನಗರ: ಪ್ರಧಾನಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆ ಮೋದಿಯವರ ಬಗ್ಗೆ ಅವರಲ್ಲಿರುವ ತೊಳಲಾಟವನ್ನು ತೋರಿಸುತ್ತದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ಗುರುವಾರ ಹೇಳಿದ್ದಾರೆ.

ವೈಬ್ರೆಂಟ್ ಗುಜರಾತ್ 2017 ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬೆಳೆಯುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಕಂಡು ರಾಹುಲ್ ಗಾಂಧಿಯವರು ತಲೆಕೆಡೆಸಿಕೊಂಡಿದ್ದು, ತಮ್ಮ ರಾಜಕೀಯ ಪರಂಪರೆಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಈ ರೀತಿಯಾದ ಹೇಳಿಕೆಯನ್ನು ನೀಡಿದ್ದಾರೆಂದು ಹೇಳಿದ್ದಾರೆ.

ರಜೆ ಮುಗಿಸಿ ಬಂದ ನಂತರ ಹಾಗೂ ಆತ್ಮಾವಲೋಕನದ ಬಳಿಕ ಈ ರೀತಿಯಾದ ಹೇಳಿಕೆಗಳು ಬರುವುದು ಸಹಜ. ದೇಶ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಮೋದಿಯವರ ಜನಪ್ರಿಯತೆ ಬೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ತಲೆಕೆಡಿಸಿಕೊಂಡಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮೋದಿಯವರ ವಿರುದ್ಧ ಅಂತಹ ಕೀಳು ಮಟ್ಟದ ಹೇಳಿಕೆಗಳು ಬರುವುದು ಸಹಜವೇ ಆಗಿದೆ. ಆದರೆ, ಒಂದನ್ನು ಹೇಳಲು ಇಚ್ಛಿಸುತ್ತೇನೆ ಪ್ರಧಾನಿ ಮೋದಿಯವರಿಗೆ ಇಡೀ ದೇಶದ ಜನತೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ಮೇಲೆ ನಂಬಿಕೆಯನ್ನು ಇಟ್ಟಿದೆ ರಾಹುಲ್ ಗಾಂಧಿಗೆ ಇದೇ ದೊಡ್ಡ ಪ್ರತಿಕ್ರಿಯೆ ಎಂದು ಹೇಳಬಹುದು.

ರಾಹುಲ್ ಗಾಂಧಿಯವರು ಉತ್ತರಪ್ರದೇಶದ ಅಮೇಧಿಯ ಲೋಕಸಭಾ ಸೀಟು ಪಡೆಯುವ ಸಲುವಾಗಿ ಕೆಲಸ ಮಾಡಿದ್ದರು. ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಇಬ್ಬರ ನಡುವೆ ಹೋಲಿಕೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ವೈಬ್ರಂಟ್ ಶೃಂಗಸಭೆಯನ್ನು ಆರಂಭಿಸಲಾಗಿತ್ತು. ಅಮೇಥಿ ಕ್ಷೇತ್ರದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. 10 ವರ್ಷಗಳ ಕಾಲ ಅಮೇಥಿಯಲ್ಲಿ ಅಧಿಕಾರ ನಡೆಸಿ ಅಭಿವೃದ್ಧಿಯನ್ನು ಮಾಡದ ಒಬ್ಬ ಮನುಷ್ಯ ಗುಜರಾತ್ ರಾಜ್ಯ ಆರ್ಥಿಕ ಶಕ್ತಿಯನ್ನೇ ಬದಲಿಸಿದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆಂದು ತಿಳಿಸಿದ್ದಾರೆ.

ಇದೇ ವೇಳೆ ಜವಳಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದವರಿಗೆ ಧನ್ಯವಾದ ಹೇಳಿರುವ ಅವರು, ರು.8,000 ತೋಟಿ ಹಣ ಈ ವರೆಗೂ ಹೂಡಿಕೆಯಾಗಿದೆ. ಇದರಿಂದ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು,  70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಧಾನಿಗಳು ಹಾಗೂ ಬಿಜೆಪಿ ಕೇಳುತ್ತಲೇ ಬಂದಿದೆ. ದೇಶದ ಜನತೆಗೆ ಅದರ ಉತ್ತರ ಗೊತ್ತಿದೆ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಹರಿಸಿದ ರಕ್ತ ಹಾಗೂ ಕಣ್ಣೀರಿನ ಬಗ್ಗೆ ಜನ ಅರ್ಥ ಮಾಡಿಕೊಳ್ಳುತ್ತಾರೆ. 70 ವರ್ಷ ವರ್ಷದಲ್ಲಿ ನಾವೇನು ಮಾಡಿದ್ದೆವು ಅಥವಾ ಮಾಡಿಲ್ಲ ಎನ್ನುವುದನ್ನು ವಿವರಿಸುವ ಅಗತ್ಯವಲಿಲ್. ಮೋದಿಯವರು ಈ 2 ವರ್ಷದಲ್ಲಿ ನಾವು ಮಾಡಲಾಗದ್ದನ್ನು ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಸಂವಿಧಾನ ಸಂಸ್ಥೆಗಳನ್ನು ಬಿಜೆಲಿ ಬಲಹೀನವಾಗುವಂತೆ ಮಾಡಿದೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com