ಮುಂಬೈ: ಜ.14 ರಂದು ಇಸ್ಕಾನ್ ನಿಂದ ಜಗನ್ನಾಥ್ ರಥಯಾತ್ರೆ

ಇಸ್ಕಾನ್ ಸಂಸ್ಥೆ ಜ.14 ರಂದು ಮುಂಬೈ ನಲ್ಲಿ ಜಗನ್ನಾಥ್ ರಥಯಾತ್ರೆಯನ್ನು ಹಮ್ಮಿಕೊಂಡಿದ್ದು 3 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಇಸ್ಕಾನ್ ಜಗನ್ನಾಥ್ ರಥಯಾತ್ರೆ (ಸಂಗ್ರಹ ಚಿತ್ರ)
ಇಸ್ಕಾನ್ ಜಗನ್ನಾಥ್ ರಥಯಾತ್ರೆ (ಸಂಗ್ರಹ ಚಿತ್ರ)
ಮುಂಬೈ: ಇಸ್ಕಾನ್ ಸಂಸ್ಥೆ ಜ.14 ರಂದು ಮುಂಬೈ ನಲ್ಲಿ ಜಗನ್ನಾಥ್ ರಥಯಾತ್ರೆಯನ್ನು ಹಮ್ಮಿಕೊಂಡಿದ್ದು 3 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. 
ಮಧ್ಯಾಹ್ನ 3 ಗಂಟೆಗೆ ಶಿವಾಜಿ ಪಾರ್ಕ್ ಗ್ರೌಂಡ್ಸ್ ನಿಂದ ಪ್ರಾರಂಭವಾಗುವ ರಥಯಾತ್ರೆ , ಶಿವಸೇನಾ ಭವನ್, ಪ್ಲಾಜಾ, ಮಾರುತಿ ಮಂದಿರ, ಪೋರ್ಚುಗೀಸ್ ಚರ್ಚ್, ಗೋಖಲೆ ರಸ್ತೆ, ಖೆದ್ ಗಲ್ಲಿ, ಸಿಲ್ವರ್ ಅಪಾರ್ಟ್ ಮೆಂಟ್ ಹಾಗೂ ಪ್ರಭಾದೇವಿ ಅಪಾರ್ಟ್ ಮೆಂಟ್ ಗಳ ಮೂಲಕ ಸಾಗಿ ಮತ್ತೆ ಸಂಜೆ 6:30 ರ ವೇಳೆಗೆ ಶಿವಾಜಿ ಪಾರ್ಕ್ ಗೆ ಬರಲಿದೆ ಎಂದು ಕಾರ್ಯಕ್ರಮದ ಆಯೋಜಕ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. 
 7 ಗಂಟೆ ವೇಳೆಗೆ ಮಂಗಳ ಯಾಗ ನಡೆಯಲಿದ್ದು ಬಳಿಕ ಜಗನ್ನಾಥ ದೇವರಿಗೆ 56 ಬಗೆಯ ಭಕ್ಷ್ಯಗಳನ್ನು ನೈವೇದ್ಯ ಮಾಡಲಾಗುವುದು ಎಂದು ಇಸ್ಕಾನ್ ತಿಳಿಸಿದೆ. ಪ್ರತಿ ವರ್ಷ ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವರ ರಥೋತ್ಸವ ನಡೆಯಲಿದೆ, ಆದರೆ ಪ್ರತಿಯೊಬ್ಬರಿಗೂ ಪುರಿಗೆ ತೆರಳಲು ಸಾಧ್ಯವಾಗದೇ ಇರುವುದರಿಂದ ಇಸ್ಕಾನ್ ವಿಶ್ವಾದ್ಯಂತ ಜಗನ್ನಾಥ್ ರಥಯಾತ್ರೆ ಹಮ್ಮಿಕೊಳ್ಳಲಿದೆ ಎಂದು ಇಸ್ಕಾನ್ ವಕ್ತಾರ ಕುಲಕರ್ಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1967 ರಲ್ಲಿ ಇಸ್ಕಾನ್ ನ ಸ್ಥಾಪಕರಾದ ಪ್ರಭುಪಾದರು ಮೊದಲ ಬಾರಿ ಈ ರೀತಿಯ ರಥಯಾತ್ರೆ ನಡೆಸಿದ್ದರು. ನಂತರದ ದಿನಗಳಲ್ಲಿ ವಿಶ್ವಾದ್ಯಂತ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com