ಯುದ್ಧಭೂಮಿಯಲ್ಲಿ ಮಹಿಳೆಯರು ಹೆಚ್ಚುವರಿ ಸೌಲಭ್ಯ ಕೇಳುವಂತಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಯುದ್ಧಭೂಮಿಯ ಮುಂಚೂಣಿಯಲ್ಲಿರಲು ಬಯಸಿದರೆ ಮಹಿಳೆಯರು ಹೆಚ್ಚುವರಿ ಸೌಲಭ್ಯಗಳನ್ನು ಕೇಳುವಂತಿಲ್ಲ ಎಂದಿದ್ದಾರೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಸಮಾನ ಅವಕಾಶಗಳನ್ನು ಪಡೆಯುವವರು ಅದಕ್ಕೆ ಸಮನಾದ ಜವಾಬ್ದಾರಿಯನ್ನೂ ನಿರ್ವಹಿಸಲು ಸಿದ್ಧವಿರಬೇಕೆಂಬುದನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೂಚ್ಯವಾಗಿ ತಿಳಿಸಿದ್ದು, ಯುದ್ಧಭೂಮಿಯ ಮುಂಚೂಣಿಯಲ್ಲಿರಲು ಬಯಸಿದರೆ ಮಹಿಳೆಯರು ಹೆಚ್ಚುವರಿ ಸೌಲಭ್ಯಗಳನ್ನು ಕೇಳುವಂತಿಲ್ಲ ಎಂದಿದ್ದಾರೆ. 
ಯೋಧರು ಕೆಲವೊಮ್ಮೆ ಸೇನಾ ಟ್ಯಾಂಕ್ ಗಳಲ್ಲೆ ಮಲಗಿ ಅಲ್ಲೇ ಅಡುಗೆ ಸಿದ್ಧಪಡಿಸಿಕೊಳ್ಳುತ್ತಾರೆ ಎಂದಿರುವ ಬಿಪಿನ್ ರಾವತ್, ಗಸ್ತು ತಿರುಗುವ ವೇಳೆ ಅನೇಕ ಬಾರಿ ಶೌಚಾಲಯದ ವ್ಯವಸ್ಥೆಯೂ ಇರುವುದಿಲ್ಲ, ಇಡೀ ಸಮಾಜದ ದೃಶ್ಟಿಯಿಂದ ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗಿದೆ. ಒಂದು ವೇಳೆ ಯುದ್ಧಭೂಮಿಯಲ್ಲಿ ಮಹಿಳೆಯರಿಗೆ ಮುಂಚೂಣಿ ಸ್ಥಾನ ನೀಡಿದರೆ, ಪುರುಷರಂತೆಯೇ ಮಹಿಳೆಯರೂ ಸಮಾನವಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ ಅರ್ಥಾತ್ ಪುರುಷರು ಹೇಗೆ ಕಾರ್ಯನಿರ್ವಹಿಸುತ್ತಾರೋ ಹಾಗೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ. 
ಕೆಲವೊಮ್ಮೆ ಒಂದು ಯುನಿಟ್ ನ 3-4 ಯೋಧರು ಒಟ್ಟಿಗೆ ಟ್ಯಾಂಕ್ ಗಳಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಮ್ಮೊಮ್ಮೆ ಮಹಿಳಾ ಯೋಧರು ಪುರುಷ ಯೋಧರು ಒಟ್ಟಿಗೆ ಇರಬೇಕಾದ ಅನಿವಾರ್ಯತೆ ಎದುರಾಗುತ್ತದೆ. 
ಯುದ್ಧಭೂಮಿಯಲ್ಲಿ ಸಕ್ರಿಯರಾಗಲು ಬಯಸುತ್ತಿರುವ ಮಹಿಳೆಯರು ಸ್ವತಃ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ, ಸೇನೆಗೆ ಸೇರಲು ಬಯಸುವ ಮಹಿಳೆಯರು ಈ ಬಗ್ಗೆ  ತಮ್ಮ ನಿರ್ಧಾರವನ್ನು ಪ್ರಕಟಿಸಿದರೆ ಯುದ್ಧಭೂಮಿಯಲ್ಲಿ ಮಹಿಳೆಯರಿಗೆ ಮುಂಚೂಣಿ ಸ್ಥಾನ ನೀಡುವುದರ ಬಗ್ಗೆ ನಾವೂ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ. 
ಸೇನೆಯ ಇಂಜಿನಿಯರಿಂಗ್, ಸಿಗ್ನಲ್ ವಿಭಾಗಗಳಲ್ಲಿ ಮಹಿಳೆಯರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಒಂದು ಹೆಜ್ಜೆ ಮುಂದಿರುವ ವಾಯುಪಡೆ ಯುದ್ಧ ವಿಮಾನಗಳಿಗೆ ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com