ನೋಟಿನ ಮೇಲೆ ಗಾಂಧಿ ಬದಲು ಮೋದಿ ಬಂದರೂ ಆಶ್ಚರ್ಯವೇನಿಲ್ಲ; ಅಬು ಅಜ್ಮಿ

ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಬದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಬಂದರೂ ಅದರಲ್ಲಿ ಆಶ್ಚರ್ಯಪಡುವಂತಹದ್ದೇನು ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ...
ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ
ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ

ಮುಂಬೈ: ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಬದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಬಂದರೂ ಅದರಲ್ಲಿ ಆಶ್ಚರ್ಯಪಡುವಂತಹದ್ದೇನು ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ.

ಕ್ಯಾಲೆಂಡರ್ ನಲ್ಲಿ ಗಾಂಧಿ ಚಿತ್ರದ ಬದಲಿಗೆ ನರೇಂದ್ರ ಮೋದಿ ಚಿತ್ರ ಪ್ರಕಟವಾಗಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾಡಿರುವ ಅವರು, ಇದರಲ್ಲಿ ಆಶ್ಚರ್ಯಪಡುವಂತಹದ್ದೇನು ಇಲ್ಲ. ನಾಳೆ ನೋಟುಗಳ ಮೇಲೆ ಗಾಂಧೀಜಿಯವರ ಬದಲಿಗೆ ತಮ್ಮ ಭಾವಿಚಿತ್ರವನ್ನೇ ಮೋದಿಯವರು ಹಾಕಿಕೊಳ್ಳಬಹುದು ಎಂದು ಹೇಳಿದ್ದಾರೆ.

ಖಾದಿ ಮತ್ತು ಚರಕ ಮಹಾತ್ಮಾ ಗಾಂಧಿಯವರಿಗೆ ಸಂಬಂಧಿಸಿದ್ದು, ಚರಕ ಮತ್ತು ಖಾದಿಯನ್ನು ಪರಿಚಯಿಸುವ ಮೂಲಕ ಗಾಂಧೀಜಿಯವರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು. ಚರಕ ಮತ್ತು ಖಾದಿ ಗಾಂಧೀಜಿಯವರ ಗುರ್ತಿಕೆಯಾಗಿದೆ. ಈ ರೀತಿಯ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ಪ್ರಧಾನಮಂತ್ರಿ ನರೇಂದ್ರಿ ಮೋದಿ ಹಾಗೂ ಮಹಾತ್ಮಾ ಗಾಂಧೀಜಿಯವರ ಹೋಲಿಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com