ಲಕ್ನೋ: ರೇಡಾರ್ ಆವರ್ತನ ವ್ಯವಸ್ಥೆಯ ವೈಫಲ್ಯದಿಂದಾಗಿ ಶನಿವಾರ ಲಕ್ನೋ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳನ್ನು ಮುಂದಿನ ಸೂಚನೆಯವರೆಗೆ ರದ್ದುಪಡಿಸಲಾಗಿದ್ದು, ಇದರಿಂದ ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಯಿತು.
ರೇಡಾರ್ ಡಿವಿಒಆರ್ ವೈಫಲ್ಯದಿಂದ ಇಂದು ಸಂಜೆ 4.30ರ ವೇಳೆಗೆ ಗೊತ್ತಾದಾಗ ಸುಮಾರು 16 ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿತು.
ವಿಮಾನಗಳ ಹಾರಾಟ ಸ್ಥಗಿತದಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿದ್ದು ನಿಲ್ದಾಣದಲ್ಲಿಯೇ ನಿಲ್ಲುವಂತಾಗಿದೆ.