ಕ್ಯಾಲೆಂಡರ್ ನಲ್ಲಿ ಗಾಂಧಿ ಬದಲು ಮೋದಿ ಚಿತ್ರ ಹಾಕಿರುವುದು ದೇಶದ್ರೋಹ: ಲಾಲೂ ಪ್ರಸಾದ್

ಖಾದಿ ಮತ್ತು ಗ್ರಾಮೋದ್ಯೋಗ ಕ್ಯಾಲೆಂಡರ್ ಹಾಗೂ ಡೈರಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ತೆಗೆದು ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ...
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್

ಪಾಟ್ನಾ: ಖಾದಿ ಮತ್ತು ಗ್ರಾಮೋದ್ಯೋಗ ಕ್ಯಾಲೆಂಡರ್ ಹಾಗೂ ಡೈರಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ತೆಗೆದು ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿರುವುದು ದೇಶದ್ರೋಹದ ಕೆಲಸ ಎಂದು ಆರ್ ಜೆಡಿ ಮುಖ್ಯಸ್ಥಲಾಲೂ ಪ್ರಸಾದ್ ಆರೋಪಿಸಿದ್ದಾರೆ.

ಮಕರ ಸಂಕ್ರಾಂತಿ ಪ್ರಯಕ್ತ ತಮ್ಮ ಮನೆಯಲ್ಲಿ ಹಮ್ಮಿಕೊಂಡಿದ್ದ ದಹಿ -ಚೂರ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಬದಲು ಮೋದಿ ಚಿತ್ರ ಹಾಕಿರುವುದು ದುರಾದೃಷ್ಟ, ಮೋದಿ ಗಾಂಧಿ ಅವರ ವ್ಯಕ್ತಿತ್ವದ ಒಂದು ಸಣ್ಣ ಅಣುವಿಗೂ ಸಮರಲ್ಲ, ಗಾಂಧಿ ಅವರ ಚಿತ್ರ ತೆಗೆದಿರುವು ರಾಷ್ಟ್ರಪಿತನಿಗೆ ಮಾಡಿದ ದೊಡ್ಡ ಅವಮಾನ, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಗಾಂಧಿ ಬದಲು ಮೋದಿ ಚಿತ್ರ ಹಾಕಿರುವುದು ದೇಶದ್ರೋಹದ ಕೆಲಸ. ಹೀಗಾಗಿ ದೇಶದ ಜನತೆ ದೇಶದ್ರೋಹದ ಕೇಸ್ ದಾಖಲಿಸಬೇಕು, ರಾಷ್ಟ್ರಪಿತನಿಗೆ ಆಗಿರುವ ಅವಮಾನದ ವಿರುದ್ಧ ಜನರು ಪ್ರತಿಭಟನೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com