ಮಹಾತ್ಮ ಗಾಂಧಿಗಿಂತ ಅಂಬೇಡ್ಕರ್ ಮಹಾನ್ ನಾಯಕ: ಒವೈಸಿ

ಜಾತ್ಯಾತೀತ ಹಾಗೂ ವರ್ಗರಹಿತ ಸಂವಿಧಾನ ನೀಡಿದ ದಲಿತರ ಐಕಾನ್ ಡಾ.ಬಿ. ಆರ್ ಅಂಬೇಡ್ಕರ್ ಮಹಾತ್ಮ ಗಾಂಧಿಗಿಂತ ದೊಡ್ಡ ನಾಯಕ ಎಂದು ..
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ

ಸಂಬಾಲ್: ಜಾತ್ಯಾತೀತ ಹಾಗೂ ವರ್ಗರಹಿತ ಸಂವಿಧಾನ ನೀಡಿದ ದಲಿತರ ಐಕಾನ್ ಡಾ.ಬಿ. ಆರ್ ಅಂಬೇಡ್ಕರ್ ಮಹಾತ್ಮ ಗಾಂಧಿಗಿಂತ ದೊಡ್ಡ ನಾಯಕ ಎಂದು ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಇತ್ತೇಹಾದ್ ಉಲ್ ಮುಸ್ಲಿಮೀನ್ ರ್ಯಾಲಿಯಲ್ಲಿ ಮಾತನಾಡಿದ ಒವೈಸಿ ವರ್ಗ ರಹಿತ ಹಾಗೂ ಜಾತ್ಯಾತೀತ ಸಂವಿಧಾನ ನೀಡಿದ್ದರೂ ದೇಶದಲ್ಲಿ ಅನ್ಯಾಯ ತಾಂಡವವಾಡುತ್ತಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿ ಹದಗೆಡಿಸಲು ಆರ್ ಎಸ್ ಎಸ್ ಜನ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿ ಮಹಾತ್ಮ ಗಾಂಧಿ ಅವರ ಅನುಯಾಯಿಯಾಗಬಹುದು, ಕ್ಯಾಲೆಂಡರ್ ನಲ್ಲಿ ಚರಕ ಹಿಡಿದುಕೊಂಡ ತಕ್ಷಣ ರಾಷ್ಟ್ರಪಿತ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಒವೈಸಿ ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗುವ ಮುನ್ನ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡತ್ತೇವೆ ಎಂದು ಹೇಳುತ್ತಿದ್ದ ಮೋದಿ, ಸರ್ಜಿಕಲ್ ಸ್ಟ್ರೈಕ್ ವೇಳೆ 28 ಮಂದಿ ಯೋಧರ ಸಾವಿಗೆ ಇದುವರೆಗೊ ಪಾಕಿಸ್ತಾನಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ದೂರಿದ್ದಾರೆ. ಬಡ ಜನರಿಗೆ ತೊಂದರೆ ನೀಡುವ ಸಲುವಾಗಿಯೇ ನವೆಂಬರ್ 8 ರಂದು ನೋಟು ನಿಷೇಧ ಜಾರಿಗೆ ತರಲಾಯಿತು ಎಂದು ಆಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com