24 ವಾರಗಳ ಗರ್ಭ ತೆಗೆಸಲು ಮಹಿಳೆಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್

ಮಹಿಳೆಯ ಜೀವ ರಕ್ಷಣೆಯ ಉದ್ದೇಶದಿಂದ 24 ವಾರಗಳ ಗರ್ಭ ತೆಗೆಸಲು ಮುಂಬಯಿ ಮಹಿಳೆಗೆ ಸುಪ್ರೀಂ ಕೋರ್ಟ್ ಅವಕಾಶ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಮಹಿಳೆಯ ಜೀವ ರಕ್ಷಣೆಯ ಉದ್ದೇಶದಿಂದ 24 ವಾರಗಳ ಗರ್ಭ ತೆಗೆಸಲು ಮುಂಬಯಿ ಮಹಿಳೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.

ನ್ಯಾ. ಎಸ್ .ಎ ಬೋಬ್ಡೆ ಮತ್ತು ಜಸ್ಟೀಸ್ ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ಅನುಮತಿ ನೀಡಿದೆ. ಆದರೆ 7 ವೈದ್ಯರನ್ನೊಳಗೊಂಡ ಮಂಡಳಿ ಗರ್ಭಕೋಶದಿಂದ ಬೆಳವಣಿಗೆಯಾಗದ ತಲೆಬುರಡೆಯನ್ನು ಹೊರತೆಗೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.

ಕೆಇಎಂ ಆಸ್ಪತ್ರೆಗೆ ದಾಖಲಾಗಿದ್ದ 22 ವರ್ಷದ ಮಹಿಳೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಗರ್ಭವನ್ನು ಮುಂದುವರೆಸುವುದರಿಂದ ಮಹಿಳೆಯ ಜೀವಕ್ಕೆ ಹಾನಿಯಾಗಬಹುದು ಎಂದು ತಿಳಿಸಿದೆ. ಹೀಗಾಗಿ ಪರಿಶೀಲನೆ ನಡೆಸಿದ 7 ವೈದ್ಯರ ತಂಡವೇ ಮಹಿಳೆಗೆ ಗರ್ಭಪಾತ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com