ಕ್ಯಾಲೆಂಡರ್ ವಿವಾದ: ಅನುಮತಿಯಿಲ್ಲದೆಯೇ ಮೋದಿ ಭಾವ ಚಿತ್ರ ಬಳಸಿಕೊಂಡಿದ್ದ ಕೆವಿಐಸಿ?

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಬಳಕೆ ಇದೀಗ ಪ್ರಧಾನಿ ಕಾರ್ಯಾಲಯದ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಅನುಮತಿ ಇಲ್ಲದೆಯೇ ಕೆವಿಐಸಿ ಮೋದಿಯವರು ಭಾವಚಿತ್ರವನ್ನು ಬಳಸಿಕೊಂಡಿದೆ...
ಕೆವಿಐಸಿ ಕ್ಯಾಲೆಂಡರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರ
ಕೆವಿಐಸಿ ಕ್ಯಾಲೆಂಡರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರ

ನವದೆಹಲಿ: ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಬಳಕೆ ಇದೀಗ ಪ್ರಧಾನಿ ಕಾರ್ಯಾಲಯದ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಅನುಮತಿ ಇಲ್ಲದೆಯೇ ಕೆವಿಐಸಿ ಮೋದಿಯವರು ಭಾವಚಿತ್ರವನ್ನು ಬಳಸಿಕೊಂಡಿದೆ ಎಂಬ ವಿಚಾರ ಇದೀಗ ಬೆಳಕಿದೆ ಬಂದಿದೆ.

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇನ್ನಿತರೆ ವಿರೋಧ ಪಕ್ಷಗಳು ತೀವ್ರ ವಿರೋಧಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ಪ್ರಕರಣ ಇದೀಗ ದೊಡ್ಡ ವಿವಾದವಾಗಿದ್ದು, ಕೆವಿಐಸಿ ಮೋದಿಯವರ ಅನುಮತಿಯಿಲ್ಲದೆಯೇ ಅವರ ಫೋಟವನ್ನು ಬಳಕೆ ಮಾಡಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ದಿ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ, ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆಂದು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹೇಳಿಕೊಂಡಿದ್ದಾರೆಂದು ತಿಳಿಸಿದೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಮಂತ್ರಿಗಳ ಕಾರ್ಯಾಲಯ ವಿವಾದ ಸಂಬಂಧ ಶೀಘ್ರಗತಿಯಲ್ಲಿ ವರದಿ ಸಲ್ಲಿಸುವಂತೆ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಪ್ಪಿಗೆಯನ್ನು ಪಡೆಯದೆಯೇ ಅವರ ಭಾವಚಿತ್ರವನ್ನು ಬಳಕೆ ಮಾಡಿರುವುದು ಇದು ಮೊದಲೇನಲ್ಲ. ನಿಯಮದ ಪ್ರಕಾರ ಅನುಮತಿಯಿಲ್ಲದೆಯೇ ಪ್ರಧಾನಿಗಳ ಹೆಸರು ಅಥವಾ ಫೋಟೋಗಳನ್ನು ಬಳಸಬಾರದು. ಆದರೆ, ಈ ಹಿಂದೆ ರಿಲಾಯನ್ಸ್ ಜಿಯೋ, ಪೇಟಿಎಂ ಕೂಡ ಮೋದಿಯವರ ಒಪ್ಪಿಗೆ ಇಲ್ಲದೆಯೇ ಅವರ ಫೋಟೋಗಳನ್ನು ಬಳಕೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com