ವಾಯು ಮಾಲಿನ್ಯದಿಂದಾಗಿ ದೆಹಲಿ, ಮತ್ತು ಮುಂಬಯಿಗಳಲ್ಲಿ 81 ಸಾವಿರ ಸಾವು

ದೆಹಲಿ ಮತ್ತು ಮುಂಬಯಿ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ 2015ಲ್ಲಿ 30 ವರ್ಷಮೇಲ್ಪಟ್ಟ 80,665 ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ಮತ್ತು ಮುಂಬಯಿ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ 2015ಲ್ಲಿ 30 ವರ್ಷಮೇಲ್ಪಟ್ಟ 80,665 ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ ಅಧ್ಯಯನವೊಂದು ತಿಳಿಸಿದೆ.

ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಕಳೆದ ವರ್ಷ ವಾಯುಮಾಲಿನ್ಯದ ಕಾರಣಕ್ಕಾಗಿ ಆಗಿರುವ ವೆಚ್ಚ 70,000 ಕೋಟಿ ರೂ. ಇದು ದೇಶಿಯ ಒಟ್ಟು ಉತ್ಪಾದನೆಯ 0.71% ರಷ್ಟು ಆಗಿದೆ ಎಂದು ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಬಾಂಬೆ ಅಧ್ಯಯನ ವರದಿ ತಿಳಿಸಿದೆ.

ವಾತಾವರಣದಲ್ಲಿರುವ ಮಾರಕ ವಾಯುಕಣದ ಪ್ರಮಾಣ ಹತ್ತು ಮೈಕ್ರಾನ್‌ಗಳಷ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ. ದಿಲ್ಲಿಯಲ್ಲಿ ವಾಹನ ಹೊರ ಸೂಸುವ ಹೊಗೆ, ನಿರ್ಮಾಣ ಕಾಮಗಾರಿ ಧೂಳು ಮತ್ತು ಇತರ ಕೈಗಾರಿಕಾ ಮಾಲಿನ್ಯಕಾರಕ ಕಣಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಕಾಲಿಕ ಮರಣಗಳು ಸಂಭವಿಸಿವೆ. 1995ರಲ್ಲಿ ಇಂಥ ಮರಣ ಪ್ರಮಾಣ ದಿಲ್ಲಿಯಲ್ಲಿ 19,716 ರಷ್ಟಿತ್ತು, 2015ರ ವೇಳೆಗೆ ಇದು 48,651ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com