ನವದೆಹಲಿ: ಮದ್ಯ ದೊರೆ ವಿಜಯ್ ಮಲ್ಯ ಅವರಿಂದ 6,203 ಕೋಟಿ ರೂಪಾಯಿ ಸಾಲವನ್ನು ಹಿಂಪಡೆಯಲು ಪ್ರಕ್ರಿಯೆಗಳನ್ನು ಆರಂಭಿಸಲು 17 ಬ್ಯಾಂಕುಗಳ ಒಕ್ಕೂಟಗಳಿಗೆ ಸಾಲ ಹಿಂಪಡೆಯುವ ನ್ಯಾಯಾಧೀಕರಣ(ಡಿಆರ್ ಟಿ) ಗುರುವಾರ ಅನುವು ಮಾಡಿಕೊಟ್ಟಿದೆ.
ಕಿಂಗ್ ಫಿಶರ್ ಏರ್ ಲೈನ್ಸ್ ಕೇಸಿಗೆ ಸಂಬಂಧಪಟ್ಟಂತೆ ವಿಜಯ್ ಮಲ್ಯ ಅವರ ವಿರುದ್ಧ ಬ್ಯಾಂಕುಗಳು ಹಾಕಿದ್ದ ಕೇಸಿನ ವಿಚಾರಣೆಯನ್ನು ನ್ಯಾಯಾಧೀಕರಣ ನಡೆಸಿದೆ.
ಕಳೆದ ವರ್ಷ ಮಾರ್ಚ್ 2ರಂದು ದೇಶ ತೊರೆದಿದ್ದ ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಮುಂಬೈನ ವಿಶೇಷ ಅಕ್ರಮ ಹಣ ಸಾಗಣೆ ತಡೆ ನ್ಯಾಯಾಲಯ ಬ್ಯಾಂಕ್ ಸಾಲ ಪಾವತಿಸದಿರುವ ಕೇಸಿಗೆ ಸಂಬಂಧಪಟ್ಟಂತೆ ಘೋಷಿಸಿತ್ತು.
ಪ್ರಸ್ತುತ ಲಂಡನ್ ನಲ್ಲಿ ನೆಲೆಸಿರುವ ಮಲ್ಯ 6,000 ಕೋಟಿಗೂ ಅಧಿಕ ಸಾಲ ಹೊಂದಿದ್ದಾರೆ.