ಹೊಸ ಹೆಚ್-1 ಬಿ ವೀಸಾ ಮಸೂದೆ: ಅಮೆರಿಕಾ ವಿವಿಗಳಲ್ಲಿ ಕಲಿತ ವಿದೇಶಿಗರಿಗೆ ಆದ್ಯತೆ

ಹೊಸ ಮಸೂದೆಯನ್ನು ಕಾಂಗ್ರೆಸ್ ಅಂಗೀಕರಿಸಿದರೆ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿದವರಿಗೆ ಮೊದಲ ಆದ್ಯತೆ ಸಿಗಲಿದೆ.
ಹೊಸ ಹೆಚ್-1 ಬಿ ವೀಸಾ ಮಸೂದೆ: ಅಮೆರಿಕಾ ವಿವಿಗಳಲ್ಲಿ ಕಲಿತ ವಿದೇಶಿಗರಿಗೆ ಆದ್ಯತೆ
ಹೊಸ ಹೆಚ್-1 ಬಿ ವೀಸಾ ಮಸೂದೆ: ಅಮೆರಿಕಾ ವಿವಿಗಳಲ್ಲಿ ಕಲಿತ ವಿದೇಶಿಗರಿಗೆ ಆದ್ಯತೆ
ವಾಷಿಂಗ್ ಟನ್: ಅಮೆರಿಕಾದ ಸೆನೆಟ್ ನ್ ಇಬ್ಬರು ಪ್ರಭಾವಿ ಸದಸ್ಯರು ಹೊಸ ಹೆಚ್-1 ಬಿ ವೀಸಾ ಮಸೂದೆ ಮಂಡಿಸುವುದಾಗಿ ಘೋಷಿಸಿದ್ದು, ಹೊಸ ಮಸೂದೆಯನ್ನು ಕಾಂಗ್ರೆಸ್ ಅಂಗೀಕರಿಸಿದರೆ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿದವರಿಗೆ ಮೊದಲ ಆದ್ಯತೆ ಸಿಗಲಿದೆ. 
ವಿದೇಶಿಗರು ಅಮೆರಿಕನ್ನರ ಕೆಲಸ ಕಸಿಯುತ್ತಿದ್ದಾರೆ ಎಂಬ ಕಾರಣದಿಂದ, ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಹೆಚ್-1 ಬಿ ವೀಸಾ ನಿಯಮಗಳನ್ನು ಬಿಗಿಗೊಳಿಸುವ ಪ್ರಸ್ತಾವನೆ ಇದೆ. ಇದರಿಂದ ಭಾರತೀಯ ಐಟಿ ಕ್ಷೇತ್ರಗಳಿಗೆ ಹೆಚ್ಚಿನ ಪರಿಣಾಮ ಬೀರಲಿದೆ. ಆದರೆ ಹೊಸ ಹೆಚ್-1 ಬಿ ವೀಸಾ ಮಸೂದೆ ಅಂಗೀಕಾರಗೊಂಡರೆ ಅಮೆರಿಕಾದ ವಿವಿಯಲ್ಲಿ ಕಲಿತ ವಿದೇಶಿಗರಿಗೆ ಆದ್ಯತೆ ನೀಡಲಿದೆ ಎಂದು ಮಸೂದೆಯನ್ನು ಮಂಡಿಸಲು ತಯಾರಿ ನಡೆಸಿರುವ ಸೆನೆಟರ್ ಗಳಾದ ಚುಕ್ ಗ್ರಾಸ್ಲೆ ಡಿಕ್ ಡರ್ಬನ್ ಹೇಳಿದ್ದಾರೆ. 
ಹೊಸ ಹೆಚ್-1 ಬಿ ವೀಸಾ ಮಸೂದೆಯ ಕರಡು ಪ್ರತಿಯಲ್ಲಿ, ಅಮೆರಿಕದ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಹೊಸ ಅಂಶಗಳನ್ನು ಸೇರಿಸಲಾಗಿದ್ದು, ಅಂತಹ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವ ಅಂಶಗಳೂ ಸೇರಿವೆ. ಜೊತೆಹೆ 50 ಜನಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದು ಅದರಲ್ಲಿ ಅರ್ಧದಷ್ಟು ಉದ್ಯೋಗಿಗಳು ಹೆಚ್-1 ಬಿ ಅಥವಾ ಎಲ್-1 ವೀಸಾ ಹೊಂದಿದ್ದರೆ ಅಂತಹ ಕಂಪನಿಗಳು ಮತ್ತಷ್ಟು ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ ಎಂಬ ಅಂಶವನ್ನೂ ಮಸೂದೆಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com