ಸಾಮಾಜಿಕ ಮಾಧ್ಯಮಗಳಲ್ಲಿ ಒಬಾಮಾ ನಂತರ ಮೋದಿಗೆ ಅತಿ ಹೆಚ್ಚಿನ ಫಾಲೋವರ್ಸ್

ಅಮೆರಿಕಾ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರಿರುವುದು ಪ್ರಧಾನಿ ನರೇಂದ್ರ ಮೋದಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಅಮೆರಿಕಾ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರಿರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ.

ಒಬಾಮಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಟ್ವಿಟ್ಟರ್‌, ಯು ಟ್ಯೂಬ್‌, ಗೂಗಲ್‌ಗಳಲ್ಲಿ ಅತಿ ಹೆಚ್ಚು ಫಾಲೊವರ್ಸ್‌ ಹೊಂದಿರುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ಟ್ವಿಟ್ಟರ್‌ನಲ್ಲಿ 2.65 ಕೋಟಿ , ಫೇಸ್‌ಬುಕ್‌ನಲ್ಲಿ 3.92 ಕೋಟಿ, ಗೂಗಲ್‌ನಲ್ಲಿ 30.2 ಲಕ್ಷ , ಲಿಂಕ್ಡ್‌ ಇನ್‌ನಲ್ಲಿ 10.99 ಲಕ್ಷ , ಇನ್‌ಸ್ಟಾಗ್ರಾಂನಲ್ಲಿ 50.8 ಲಕ್ಷ, ಯು ಟ್ಯೂಬ್‌ನಲ್ಲಿ 591000 ಮಂದಿ ಮೋದಿ ಫಾಲೊವರ್ಸ್‌ ಇದ್ದಾರೆ.

ಒಂದು ಕೋಟಿ ಮಂದಿ ಮೋದಿ ಅವರ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿದ್ದಾರೆ. ರಾಜಕೀಯ ವಲಯದಲ್ಲಿ ಹೆಚ್ಚಿನವರು ಇದನ್ನು ಬಳಸುತ್ತಿದ್ದಾರೆ.

ಇತ್ತೀಚೆಗೆ ಜಾರಿಗೊಳಿಸಿರುವ ಭೀಮ್‌ ಆ್ಯಪ್‌ ಬಡವರು ಬ್ಯಾಂಕ್‌ಗಳಿಗೆ ಅಲೆದಾಡದೆ ಹಣ ಪಡೆಯಲು ಮತ್ತು ಕಳಿಸಲು ನೆರವಾಗುತ್ತಿದ್ದು, ಕ್ಯಾಶ್‌ಲೆಸ್‌ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com