ಮುಸಲ್ಮಾನ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ: ಆಂಧ್ರ, ತೆಲಂಗಾಣ ಮುಂಚೂಣಿಯಲ್ಲಿ

ಮುಸಲ್ಮಾನ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ 16 ವಸತಿ ಶಾಲೆಗಳಿಗೆ ಅನುಮೋದನೆ ನೀಡಿದ್ದು ಅವುಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮುಸಲ್ಮಾನ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ 16 ವಸತಿ ಶಾಲೆಗಳಿಗೆ ಅನುಮೋದನೆ ನೀಡಿದ್ದು ಅವುಗಳು ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಇಂತಹ ಶಾಲೆಗಳು ಹೆಚ್ಚಾಗಿವೆ.
ತೆಲಂಗಾಣ ರಾಜ್ಯ ಕೇಂದ್ರ ಸರ್ಕಾರದ ಈ ಯೋಜನೆಗಳಿಂದ ಲಾಭ ಪಡೆಯಲು ಸಕ್ರಿಯ ಕ್ರಮ ತೆಗೆದುಕೊಳ್ಳುತ್ತಿದೆ. ಸುಮಾರು 262 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ದೇಶದಲ್ಲಿ ಮುಸ್ಲಿಂ ಮಕ್ಕಳ ವಿದ್ಯಾಭ್ಯಾಸವನ್ನು ಆಧುನೀಕರಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ತೆಲಂಗಾಣದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 12.68 ಭಾಗ ಮುಸ್ಲಿಂರಿದ್ದು ಆಂಧ್ರ ಪ್ರದೇಶದಲ್ಲಿ ಶೇಕಡಾ 8.52ರಷ್ಟಿದ್ದಾರೆ. ಇಲ್ಲಿ ಇತರ ಹಿಂದೂ ಪದ್ಧತಿಯಲ್ಲಿರುವಂತೆ ಮುಸಲ್ಮಾನ ಮಕ್ಕಳಿಗೆ ಕೂಡ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ಹೇಳಿಕೊಡಲು ರಾಜ್ಯ ಸರ್ಕಾರಗಳು ಉತ್ಸುಕವಾಗಿವೆ. ಹರ್ಯಾಣ, ಪಂಜಾಬ್, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೂಡ ಮುಸ್ಲಿಂ ಧರ್ಮದ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲು ಉತ್ಸುಕವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com