
ಜೈಪುರ: ಪ್ರಧಾನಿ ನರೇಂದ್ರ ಮೋದಿ ರಾಷ್ಚ್ರಪಿತ ಮಹಾತ್ಮ ಗಾಂಧಿ ಅವರನ್ನು ಬರಿ ಬಾಯಿ ಮಾತಿನಲ್ಲಿ ಬಣ್ಣಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಆರೋಪಿಸಿದ್ದಾರೆ.
ತುಂಬಾ ಆಳವಾಗಿ ಗಾಂಧೀಜಿ ಅವರನ್ನು ದ್ವೇಷಿಸುವ ಮೋದಿ ಮೇಲ್ನೋಟಕ್ಕೆ ಅವರನ್ನು ಹೀರೋನಂತೆ ಬಿಂಬಿಸುತ್ತಾರೆ ಎಂದು ದೂರಿದ್ದಾರೆ. ಮೇಲ್ನೋಟಕ್ಕೆ ಗಾಂಧಿಯನ್ನು ಕೇವಲ ಬಾಯಿಮಾತಿನಿಂದ ಬಣ್ಣಿಸುವುದು ತುಂಬಾ ಸುಲಭದ ಕೆಲಸ, ಇದಕ್ಕೆ ಉತ್ತಮ ಉದಾಹರಣೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.
ಗಾಂಧಿ ಹಂತಕ ನಾಥೂರಾಮ್ ಗೂಡ್ಸೆ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಾಕ್ಷಿ ಮಹಾರಾಜ್ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಮಹಾತ್ಮ ಗಾಂಧೀಜಿ ಹೆಸರನ್ನು ಸರ್ಕಾರ ಹಲವು ಕಾರ್ಯಕ್ರಮಗಳಿಗೆ ಚಿಹ್ನೆಯಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ. ರಾಮಾಯಣ ಮತ್ತು ಮಹಾಭಾರತವನ್ನು ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯವಾಗಿ ಕಲಿಸಿಕೊಡಬೇಕು ಎಂದು ಅವರು ತಿಳಿಸಿದ್ದಾರೆ.
Advertisement