ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2019 ರ ಲೋಕಸಭೆ ಚುನಾವಣೆಗು ಮುನ್ನ 2000 ರು ನೋಟು ನಿಷೇಧ ಸಾಧ್ಯತೆ?

2019ರ ಚುನಾವಣೆಗು ಮುನ್ನ ಕೇಂದ್ರ ಸರ್ಕಾರ ಎರಡು ಸಾವಿರ ರು. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ...

ಹೈದರಾಬಾದ್; 2019ರ ಚುನಾವಣೆಗು ಮುನ್ನ ಕೇಂದ್ರ ಸರ್ಕಾರ ಎರಡು ಸಾವಿರ ರು. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ.  ನವೆಂಬರ್ 8 ರಂದು  ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್ ಹೇಳಿದ್ದಾರೆ.

ಹೈದಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನಿಲ್ ಬೊಕಿಲ್ ಮಾತನಾಡಿದರು. ಸರ್ಕಾರ 1 ಸಾವಿರ ರುಪಾಯಿ ನಿಷೇಧಿಸಿದ್ದು ಹಾಗೂ  2ಸಾವಿರ ರು ಹೊಸ ನೋಟು ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಯಿತೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 500 ಹಾಗೂ 1ಸಾವಿರ ರು ನೋಟು ನಿಷೇಧದ ನಂತರ ಉಂಟಾದ ತೊಂದರೆ ತಪ್ಪಿಸಲು ಮಾಡಿದ ತಾತ್ಕಾಲಿಕ ಪರಿಹಾರವಾಗಿದೆ. ಮುಂದಿನ ಲೋಕಸಭೆ ಚುನಾವಣೆಗು ಮುನ್ನ ಸರ್ಕಾರ 2ಸಾವಿರ ರು. ನೋಟು ನಿಷೇಧ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನಗದು ರಹಿತ ಆರ್ಥಿಕ ವ್ಯವಸ್ಥೆ ಕೇಳಲು ಸುಂದರ ಎನಿಸಬಹುದು, ಆದರೆ ಅದನ್ನು ಪ್ರಾಯೋಗಿಕವಾಗಿ ಭಾರತದಲ್ಲಿ ಜಾರಿ ಮಾಡಬಹುದು ಕಷ್ಟದ ಕೆಲಸ, ಏಕೆಂದರೆ ಭಾರತದಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಜನಸಂಖ್ಯೆ ಅನಕ್ಷರಸ್ಥರಾಗಿದ್ದಾರೆ. ಜೊತೆಗೆ ಬಡತನ ರೇಖೆಗಿಂತ ಕೆಳಗಿದ್ದಾರೆ. ಹೀಗಾಗಿ ನಗದು ರಹಿತ ವ್ಯವಹಾರ ಎಂಬುದು ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಯಾಗಲು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವವರು, 50 ಹಾಗೂ 100 ರು ಗಿಂತ ಹೆಚ್ಚಿಗೆ ಖರ್ಚು ಮಾಡಲು ಸಾಧ್ಯವಿಲ್ಲ, 50 ಮತ್ತು 100 ರು ನೋಟುಗಳಿಂದ ಅವರ ವ್ಯಾಪಾರ ವಹಿವಾಟಿಗೆ ಸಾಕಾಗಿರುತ್ತದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com