ಅಲ್ಪಾವಧಿ ಬೆಳೆ ಸಾಲದ ಮೇಲಿನ ರು. 660.5 ಕೋಟಿ ಮೊತ್ತದ ಬಡ್ಡಿ ಮನ್ನಾ: ಕೇಂದ್ರ

ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಹಕಾರಿ ಬ್ಯಾಂಕುಗಳ ಮೂಲಕ 2016ರ ನವೆಂಬರ್-ಡಿಸೆಂಬರ್ ನಡುವಣ ಅವಧಿಯಲ್ಲಿ ರೈತರಿಗೆ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಹಕಾರಿ ಬ್ಯಾಂಕುಗಳ ಮೂಲಕ 2016ರ ನವೆಂಬರ್-ಡಿಸೆಂಬರ್ ನಡುವಣ ಅವಧಿಯಲ್ಲಿ ರೈತರಿಗೆ ನೀಡಲಾದ ಅಲ್ಪಾವಧಿ ಬೆಳೆ ಸಾಲಗಳ ಮೇಲಿನ ಬಡ್ಡಿ ಮನ್ನಾಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಆ ಮೂಲಕ 660.50 ಕೋಟಿ ರುಪಾಯಿ ಮೊತ್ತದ ಬಡ್ಡಿಯನ್ನು ಮನ್ನ ಮಾಡಲಿದೆ. 
ಇದರ ಜತೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವದರ್ಜೆಯ ಸಮಾವೇಶ ಕೇಂದ್ರ ನಿರ್ಮಾಣ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್(ಐಐಎಂ) ಮಸೂದೆ, ಕ್ಯೋಟೋ ಪ್ರೊಟೋಕಾಲ್ ನ ಎರಡನೇ ಬದ್ಥಾ ಅವಧಿಯನ್ನು ಸ್ಥಿರೀಕರಣಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 
ಸಮಾವೇಶ ಕೇಂದ್ರವನ್ನು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್(ಐಟಿಪಿಒ) ನಿರ್ಮಿಸಲಿದ್ದು ಇದಕ್ಕೆ ತಗಲುವ ವೆಚ್ಚ 2.254 ಕೋಟಿ ರುಪಾಯಿ. ಇನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ)ಗೆ 11.35 ಎಕರೆ ಭೂಮಿಯನ್ನು ಹಸ್ತಾಂತರಿಸುವ ಪ್ರಸ್ತಾಪಕ್ಕೂ ಸಂಪುಟ ಒಪ್ಪಿಗೆ ಕೊಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com