ಗಡಿಪಾರಾಗಿರುವ ಟಿಬೆಟಿಯನ್ನರಿಗೆ ಟ್ರಂಪ್ ಹೊಸ ಆಶಾಕಿರಣ, ಟಿಬೆಟ್ ವಿವಾದ ಬಗೆಹರಿಸುವ ಭರವಸೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟಿಬೆಟಿಯನ್ನರ ಸ್ವಾಯತ್ತತೆಯ ಭರವಸೆ ಮತ್ತಷ್ಟು ಹೆಚ್ಚಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ಧರ್ಮಶಾಲಾ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟಿಬೆಟಿಯನ್ನರ ಸ್ವಾಯತ್ತತೆಯ ಭರವಸೆ ಮತ್ತಷ್ಟು ಹೆಚ್ಚಿದೆ. ಚೀನಾ-ಟಿಬೆಟ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಟ್ರಂಪ್ ಉತ್ತೇಜನ ನೀಡಲಿದ್ದಾರೆ ಎಂದು ಟಿಬೆಟ್ ನ ಗಡಿಪಾರಾಗಿರುವ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. 
ಅಮೆರಿಕದ 45 ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಟಿಬೆಟ್ ಸರ್ಕಾರದ ಸಭಾಧ್ಯಕ್ಷರು, ಈ ಹಿಂದಿನ ಅಮೆರಿಕ ಅಧ್ಯಕ್ಷರುಗಳು ಟಿಬೆಟ್ ನ ಧರ್ಮಗುರು ದಲೈ ಲಾಮ ಅವರನ್ನು ಭೇಟಿ ಮಾಡಿ ಚೀನಾ-ಟಿಬೆಟ್ ಮಾತುಕತೆಯನ್ನು ಬೆಂಬಲಿಸಿದ್ದರು. ಅಂತೆಯೇ ನಿಮ್ಮ ಅಧ್ಯಕ್ಷೀಯ ಅವಧಿಯಲ್ಲೂ ಅಮೆರಿಕ ಚೀನಾದೊಂದಿಗಿನ ಟಿಬೆಟ್ ವಿವಾದವನ್ನು ಬಗೆಹರಿಸುವುದಕ್ಕೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಟ್ರಂಪ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 
ಟಿಬೆಟ್ ನಲ್ಲಿ ಚೀನಾದ ಆಡಳಿತವನ್ನು ವಿರೋಧಿಸಿ 2009 ರಿಂದ ಈ ವರೆಗೆ 149 ಟಿಬೆಟಿಯನ್ನರ ಆತ್ಮಾಹುತಿಯಾಗಿದೆ ಎಂದು ಟಿಬೆಟ್ ಸರ್ಕಾರದ ಸ್ಪೀಕರ್ ಟ್ರಂಪ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com