ಪ್ರಿಯಾಂಕ ಗಾಂಧಿ-ವಿನಯ್ ಕಟಿಯಾರ್
ದೇಶ
ಪ್ರಿಯಾಂಕ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರಿದ್ದಾರೆ: ಬಿಜೆಪಿ ಸಂಸದ
ಪ್ರಿಯಾಂಕ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರಿದ್ದಾರೆ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಲಖನೌ: ಪ್ರಿಯಾಂಕ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರಿದ್ದಾರೆ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿನ್ನೆಯಷ್ಟೇ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪ್ರಿಯಾಂಕ ಗಾಂಧಿ ಸೇರಿದಂತೆ ಇನ್ನಿತರ ಮಹಿಳಾಮಣಿಗಳ ಹೆಸರನ್ನು ಪ್ರಕಟಿಸಿತ್ತು. ಈ ಕುರಿತು ಮಾತನಾಡಿರುವ ವಿನಯ್ ಕಟಿಯಾರ್ ಪ್ರಿಯಾಂಕ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರು ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯ್ ಕಟಿಯಾರ್ ಸೆಕ್ಸಿಯೆಸ್ಟ್ ಹೇಳಿಕೆ ಕುರಿತಂತೆ ಬಹುಜನ್ ಸಮಾಜ ಪಕ್ಷ(ಬಿಎಸ್ಪಿ) ಕಿಡಿಕಾರಿದ್ದು ಈ ಕೂಡಲೇ ಕಟಿಯಾರ್ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದೆ.
ಇನ್ನು ಕಟಿಯಾರ್ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ಇಂತಹ ಹೇಳಿಕೆ ನೀಡುವ ಮೂಲಕ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ