ವಿಚಾರಣೆ ಇಲ್ಲದೆ ಮಾಧ್ಯಮಗಳು ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಿಬಿಟ್ಟಿವೆ: ವಿಜಯ್ ಮಲ್ಯ ಟ್ವೀಟ್

ವಿಚಾರಣೆ ಇಲ್ಲದೆಯೇ ಭಾರತೀಯ ಮಾಧ್ಯಮಗಳು ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸುತ್ತಿವೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ...
ಮದ್ಯದ ದೊರೆ ವಿಜಯ್ ಮಲ್ಯ
ಮದ್ಯದ ದೊರೆ ವಿಜಯ್ ಮಲ್ಯ

ನವದೆಹಲಿ: ವಿಚಾರಣೆ ಇಲ್ಲದೆಯೇ ಭಾರತೀಯ ಮಾಧ್ಯಮಗಳು ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸುತ್ತಿವೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿಯ ತಪ್ಪು ಸಾಬೀತಾಗುವವರೆಗೂ ಆತನನ್ನು ಮುಗ್ಧನೆಂದೇ ಭಾವಿಸಲಾಗುತ್ತದೆ ಎಂದು ನಾನು ನಂಬಿದ್ದೆ. ಆದರೆ, ಮಾಧ್ಯಮಗಳು ವಿಚಾರಣೆಯಿಲ್ಲದೆಯೇ ವ್ಯಾಪಕ ಪ್ರಭಾವದೊಂದಿಗೆ ನನ್ನನ್ನು ತಪ್ಪಿತಸ್ಥನಾಗಿ ಮಾಡಿಬಿಟ್ಟಿವೆ ಎಂದು ಹೇಳಿದ್ದಾರೆ.

ವಿಜಯ್ ಮಲ್ಯ ಅವರು ಸ್ವತಃ ಅಭಿವೃದ್ಧಿಪಡಿಸಿದ್ದ ಯುನೈಟೆಡ್ ಸ್ಪಿರಿಟ್ ನ್ನು 2016ರಲ್ಲಿ ಡಿಯಾಜಿಯೋಗೆ ಮಾರಾಟ ಮಾಡುವ ಮುನ್ನ ಅದರ ಹಣವನ್ನು ಕಿಂಗ್ ಫಿಷರ್ ಏರ್ ಲೈನ್ಸ್'ಗೆ ವರ್ಗಾಯಿಸಿದ್ದರು ಎಂದು ಸೆಬಿ ಆರೋಪ ಮಾಡಿತ್ತು. ಅಲ್ಲದೆ. ಕೆಲ ದಿನಗಳ ಹಿಂದಷ್ಟೇ ಮಲ್ಯ ಮತ್ತು ಇತರ 6 ಮಂದಿ ಸೆಕ್ಯುರಿಟೀಸ್ ಮಾರುಕಟ್ಟೆ ಪ್ರವೇಶಿದಂತೆ ನಿಷೇಧ ಹೇರಿತ್ತು.

ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಸರಣಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ಮಲ್ಯ ಅವರು, ಸೆಬಿ ಆರೋಪವನ್ನು ತಳ್ಳಿಹಾಕಿದ್ದರು. ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ನ ಹಣವನ್ನು ಕಿಂಗ್ ಫಿಷರ್ ಏರ್ ಲೈನ್ಸ್ ಗೆ ವರ್ಗಾಯಿಸಲಾಗಿದೆ ಎಂಬ ಮಾತು ಹಾಸ್ಯಸ್ಪದವಾಗಿದೆ. ಒಂದು ಕಡೆ ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ಆರೋಪ ಮಾಡುತ್ತಿದೆ. ಮತ್ತೊಂದು ಕಡೆ ಯುಎಸ್ ಎಲ್ ನಿಂದ ಕಿಂಗ್ ಫಿಶರ್ ಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸೆಬಿ ಆರೋಪ ಮಾಡುತ್ತಿದೆ. ಇದೆಂಥಾ ತಮಾಷೆ?... ಯುಎಸ್ಎಲ್ ನಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಆಧಾರ ರಹಿತವಾಗಿದ್ದು, ಯುನೈಟೆಡ್ ಸ್ಪಿರಿಟ್ ನ ಖಾತೆಗಳನ್ನು ಉನ್ನತ ಲೆಕ್ಕಪತ್ರ ಪರಿಶೋಧಕರಿಂದ ಆಡಿಟ್ ಮಾಡಿಸಿ ಅನುಮೋದನೆಯನ್ನು ಪಡೆಯಲಾಗಿತ್ತು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com