ಜಾಟ್ ಪ್ರತಿಭಟನೆ: ಹರಿಯಾಣದ ಹಲವೆಡೆ ಸೆಕ್ಷನ್ 144 ಜಾರಿ

ಮೀಸಲಾತಿ ಆಗ್ರಹಿಸಿ ಜನವರಿ 29ಕ್ಕೆ ಪ್ರತಿಭಟನೆಗಳಿಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹರಿಯಾಣದ ಹಲವೆಡೆ ಸೆಕ್ಷನ್ 144 ಜಾರಿ ಮಾಡಲಿರುವುದಾಗಿ ಶನಿವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹರಿಯಾಣ: ಮೀಸಲಾತಿ ಆಗ್ರಹಿಸಿ ಜನವರಿ 29ಕ್ಕೆ ಪ್ರತಿಭಟನೆಗಳಿಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹರಿಯಾಣದ ಹಲವೆಡೆ ಸೆಕ್ಷನ್ 144 ಜಾರಿ ಮಾಡಲಿರುವುದಾಗಿ ಶನಿವಾರ ತಿಳಿದುಬಂದಿದೆ.

ನಿಷೇಧಾಜ್ಞೆ ಜಾರಿ ಹಿನ್ನಲೆಯಲ್ಲಿ 5 ಅಥವಾ ಅದಕ್ಕು ಹೆಚ್ಚು ಮಂದಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ 500 ಮೀಟರ್ ಗಳವರೆಗೆ ಗುಂಪಾಗಿ ಹೋಗುವಂತಿಲ್ಲ. ಭದ್ರತೆ ಕುರಿತಂತೆ ಈಗಾಗಲೇ ಸಾಕಷ್ಟು ಮುಂಜಾಗ್ರತೆಯನ್ನು ವಹಿಸಿರುವ ಹರಿಯಾಣ ಸರ್ಕಾರ ಹರಿಯಾಣದ ಗಡಿ ಭಾಗದ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ಹಾಗೂ ರಸ್ತೆಗಳಿಗೆ ಪೊಲೀಸ್ ಬ್ಯಾರಿಕೇಡ್ ಗಳನ್ನು ಹಾಕಿದೆ. ಅಲ್ಲದೆ, 7,000 ಹೋಮ್ ಗಾರ್ಡ್ಸ್ ಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ನಡೆದಿದ್ದ ಜಾಟ್ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ರೊಹ್ತಕ್, ಸೋನಿಪತ್ ಮತ್ತು ಝಜ್ಜರ್ ಸೇರಿದಂತೆ ಹಲವಾರು ಜಿಲ್ಲೆಗಳ ಮೇಲೆ ಪ್ರತಿಭಟನೆಯ ಬಿಸಿ ತೀವ್ರವಾಗಿ ತಟ್ಟಿತ್ತು. ಇದಲ್ಲದೇ ರಾಜಧಾನಿ ದೆಹಲಿ ಕೂಡ ಪ್ರತಿಭಟನೆಯಿಂದ ತತ್ತರಿಸಿ ಹೋಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com