
ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದ್ದು, ಸಮಾಜವಾದಿ ಹಾಗೂ ಕಾಂಗ್ರೆಸ್ ಮಹಾಮೈತ್ರಿ ಪಕ್ಷಗಳಿಗೆ ಮುಖಭಂಗವಾಗಲಿದೆ ಎಂದು 'ಟೈಮ್ಸ್ ನೌ' ನಡೆಸಿದ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ 47 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, 2017ರ ವಿಧಾನಸಭಾ ಚುನಾವಣೆಯಲ್ಲಿ 202 ಸೀಟುಗಳ ಬಹುಮತ ಪಡೆದು ಭರ್ಜರೆ ಗೆಲವು ಸಾಧಿಸಲಿದೆ ಎಂದು ಟೈಮ್ಸ್ ನೌ ಸುದ್ದಿ ವಾಹಿನಿ ನಡೆಸಿದ ಫಲಿತಾಂಶದಲ್ಲಿ ತಿಳಿದುಬಂದಿದೆ.
ಸಮೀಕ್ಷಾ ವರದಿಯಲ್ಲಿ ಬಿಜೆಪಿಯ ಜನಪ್ರಿಯತೆ 155ರಷ್ಟು ಹೆಚ್ಚಾಗಿದ್ದು,, ಆಡಳಿತಾರೂಢ ಸಮಾಜವಾದಿ ಪಕ್ಷದ ತೀವ್ರತೆ ಕುಸಿತ ಕಾಣಲಿದೆ ಎಂದು ತಿಳಿದುಬಂದಿದೆ. ಸಮಾಜವಾದಿ ಪಕ್ಷ -ಕಾಂಗ್ರೆಸ್ ಪ್ರಸ್ತುತ 250 ಸ್ಥಾನಗಳನ್ನು ಹೊಂದಿದ್ದರೂ ಕೂಡ ಸಮೀಕ್ಷೆ ಪ್ರಕಾರ ಮೈತ್ರಿಕೂಟಕ್ಕೆ ಒಲಿಯುವ ಒಟ್ಟು ಸ್ಥಾನಗಳು 147 ಮಾತ್ರ. ಇದರಂತೆ ಮಹಾಮೈತ್ರಿ ಪಕ್ಷಗಳ ಜನಪ್ರಿಯತೆ 105ಕ್ಕೆ ಕುಸಿಯಲಿದ್ದು, ಬಹುಜನ ಸಮಾಜಪಕ್ಷದ ಜನಪ್ರಿಯತೆಯೂ ಕೂಡ ಶೇ.33ಕ್ಕೆ ಇಳಿಕೆ ಕಾಣಲಿದೆ. ಮೈತ್ರಿಯಿಂದಾಗಿಯೇ ಸಮಾಜವಾದಿ ಪಕ್ಷಕ್ಕೆ ಹಿನ್ನಡೆಯುಂಟಾಗಲಿದೆ ಎಂಬ ಜನಾಭಿಪ್ರಾಯಗಳು ಮೂಡತೊಡಗಿವೆ. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳಕ್ಕೆ ಶೇ.11 ರಷ್ಟು ಜನಪ್ರಿಯತೆ ಸಿಗಲಿದ್ದು, 7 ಸೀಟುಗಳನ್ನು ಪಡೆಯಲಿದೆ
ಪ್ರಧಾನಮಂತ್ರಿ ನರೇಂದ್ರಮೋದಿಯವರ ನೋಟು ನಿಷೇಧಕ್ಕೆ ಉತ್ತರಪ್ರದೇಶದ ಜನತೆ ಬೆಂಬಲಗಳನ್ನು ವ್ಯಕ್ತಪಡಿಸಿದ್ದು, ಶೇ.63.4 ರಷ್ಟು ಜನತೆ ನೋಟು ನಿಷೇಧ ಒಳ್ಳೆಯ ನಿರ್ಧಾರವಾಗಿದೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಶೇ.31.9ರಷ್ಟು ಜನತೆ ಮಾತ್ರ ನೋಟು ನಿಷೇದ ನಿರ್ಧಾರ ಸರಿಯಾದುದಲ್ಲ ಎಂದು ಹೇಳಿಕೊಂಡಿದ್ದಾರೆ.
Advertisement