'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರ ಸರ್ಕಾರದ ಗುರಿ: ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣ

ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.
ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಸತ್ತಿನ ಉಭನ ಸದನಗಳನ್ನು ಉದ್ದೇಶಿಸಿ ಭಾಷಣಾ ಮಾಡುತ್ತಿದ್ದಾರೆ.

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮಂಗಳವಾರ ಹೇಳಿದ್ದಾರೆ.

ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು. ವಿತ್ತ ಸಚಿವ ಅರುಣ್ ಜೇಟ್ಲಿ 2017-18ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಭಾಷಣ ಮಾಡುತ್ತಿದ್ದು, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರ ಸರ್ಕಾರದ ಗುರಿಯಾಗಿದೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ರೈಲ್ವೇ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನ ಮಾಡಲಾಗಿದ್ದು, ಮೊದಲ ಬಾರಿಗೆ ಏಕಕಾಲದಲ್ಲಿ ರೈಲ್ವೇ ಬಜೆಟ್ ನ್ನು ಮಂಡನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸ್ವಚ್ಛ ಭಾರತ ಅಭಿಯಾನ ಇಂದು ಜನಾಂದೋಲನವಾಗಿ ಪರಿವರ್ತನೆಗೊಂಡಿದೆ. ಜನರ ಜೀವನ ಸುಧಾರಿಸಲು ನಮ್ಮ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದ ನೀತಿಗಳು ಬಡವರು, ಪೀಡಿತರು, ದಲಿತರು, ವಂಚಿತರ ಪರವಾಗಿದೆ. 26 ಕೋಟಿಗೂ ಅಧಿಕ ಜನರು ಜನ್ ಧನ್ ಖಾತೆಯನ್ನು ತೆರೆದಿದ್ದಾರೆ.

ದುಬಾರಿ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಸರ್ಕಾರ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ. ಇದು ಗಮನಿಸಬೇಕಾದ ವಿಚಾರವಾಗಿದೆ. ಬೇಳೆ-ಕಾಳುಗಳ ಬೆಲೆ ಏರಿಕೆ ಕಳೆದ ವರ್ಷ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಬೆಲೆ ಏರಿಕೆಗೆ ಸರ್ಕಾರ ನಿಯಂತ್ರಣವನ್ನು ತಂದಿದೆ. ರೈತರ ಜೀವನ ಮಟ್ಟ ಸುಧಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಮಹಿಳೆಯರು ಕೂಡ ಸಮಾನರಾಗಿದ್ದು, ಮಹಿಳೆಯರಿಗೆ ಸಮಾನ ಹಕ್ಕು ನೀಡಲಿ ನಾರಿ ಶಕ್ತಿ ಪ್ರಶಸ್ತಿ ಪುರಸ್ಕಾರವನ್ನು ಪ್ರಕಟಿಸಿದೆ. ಇದಲ್ಲದೆ, ಪ್ರಧಾನಮಂತ್ರಿ ಸುರಕ್ಷಿತ ಮತ್ರಿತ್ವ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆ ಮೂಲಕ ಗರ್ಭಿಣಿಯರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ. 9 ತಿಂಗಳವರೆಗೆ ತಿಂಗಳಲ್ಲಿ ಒಂದು ದಿನ ಗರ್ಭಿಣಿಯರನ್ನು ತಪಾಸಣೆ ಮಾಡಲಾಗುತ್ತದೆ. ಅವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ. ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಇಂದ್ರಧನುಷ್ ಅಭಿಯಾನವನ್ನು ಆರಂಭ ಮಾಡಲಾಗಿದ್ದು, ಸರ್ಕಾರ ಈ ಅಭಿಯಾನ 55 ಲಕ್ಷ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಸುಧಾರಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಇದನ್ನು ಪೂರ್ಣಗೊಳಿಸುವುದು ಸರ್ಕಾರ ಧ್ಯೇಯವಾಗಿದೆ. ಪ್ರಧಾನಮಂತ್ರಿ ಖಾನಿಜಿ ಕ್ಷೇತ್ರ ಕಲ್ಯಾಣ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಮೂಲಕ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸ್ಥಳೀಯ ಪ್ರದೇಶಗಳು ಅಭಿವೃದ್ಧಿಗೊಳ್ಳಲಿದೆ.

ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನೆ ಅಡಿಯಲ್ಲಿ 11,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಯುವಕ ಅಭಿವೃದ್ಧಿಗಾಗಿ ಸರ್ಕಾರ ಉದ್ಯೋಗವಕಾಶಗಳನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಬಡವರ ಅಭಿವೃದ್ಧಿ ಕಡೆಯತ್ತ ಸರ್ಕಾರ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. 5 ಕೋಟಿ ಜನರಿಗೆ ಸರ್ಕಾರ ಎಲ್ ಪಿಜಿ ಸಂಪರ್ಕವನ್ನು ಕಲ್ಪಿಸಿದ್ದು, 1.2 ಕೋಟಿ ಜನರು ಎಲ್ ಪಿಜಿ ಸಬ್ಸಿಡಿ ತೊರೆದಿದ್ದಾರೆ. ಜನರ ಶಕ್ತಿಗೆ ಸರ್ಕಾರ ಗೌರವ ಸಮರ್ಪಿಸುತ್ತದೆ. ಜನ ಶಕ್ತಿಗೆ ಸರ್ಕಾರ ಈ ಮೂಲಕ ಸಲಾಂ ಹೊಡೆಯುತ್ತಿದೆ.

40 ವರ್ಷಗಳಿಂದ ಇದ್ದ ಸೇನೆಯ ಸಮಾನ ವೇತನ ಮತ್ತು ಸಮಾನ ಪಿಂಚಣಿ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ದೇಶದ ಮೇಲೆ ನಡೆಯುತ್ತಿದ್ದ ದಾಳಿಗಳಿಗೆ ಸೀಮಿತ ದಾಳಿ ಮೂಲಕ ಸೆಪ್ಟೆಂಬರ್ 29 ರಂದು ಸರ್ಕಾರ ದಿಟ್ಟ ಉತ್ತರವನ್ನು ನೀಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಸೇನೆ ಯಶಸ್ವಿಯಾಗಿ ದಾಳಿ ಮಾಡಿದೆ. ನಮ್ಮ ಸೇನೆಯ ಧೈರ್ಯ ಹಾಗೂ ಶೂರತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಈ ಮೂಲಕ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಬಡವರ ಆರ್ಥಿಕ ಸಬಲೀಕರಣದ ಪರವಾಗಿ ನಿಂತು ಹೋರಾಟ ನಡೆಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಾಗಿ ಭೀಮ್ ಆ್ಯಪ್ ನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಗೌರವ ಸಲ್ಲಿಸಲಾಗಿದೆ. 7ನೇ ವೇತನ ಆಯೋಗ ರಚನೆ 50 ಲಕ್ಷ ಉದ್ಯೋಗಿಗಳಿಗೆ ಹಾಗೂ 35 ಲಕ್ಷ ಪಿಂಚಣಿದಾರರಿಗೆ ಲಾಭವನ್ನು ತಂದಿದೆ.

ಲೋಕಸಭೆ, ವಿಧಾನಸಭೆಗಳ ಏಕಕಾಲಿಕ ಚುನಾವಣೆ ಕುರಿತಂತೆ ಏರ್ಪಡಿಸಲಾಗಿದ್ದ ರಚನಾತ್ಮಕ ಚರ್ಚೆಯನ್ನು ನಮ್ಮ ಸರ್ಕಾರ ಸ್ವಾಗತಿಸಿದೆ ಎಂದು ಹೇಳಿದ್ದಾರೆ.

ನಂತರ ಕ್ರೀಡಾ ಲೋಕದಲ್ಲಿ ಮಿಂಚುತ್ತಿರುವ ಪಿವಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರ ಸಾಧನೆಯನ್ನು ಕೊಂಡಾಡಿರುವ ರಾಷ್ಟ್ರಪತಿಗಳು, ಸಿಂಧು, ಸಾಕ್ಷಿ ಮಲಿಕ್ ಹಾಗೂ ದೀಪಾ ಕರ್ಮಾಕರ್ ಅವರು ನಾರಿ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com