ಉ.ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಭದ್ರತಾ ಸಿಬ್ಬಂದಿಯ ಕೈಬೆರಳು ಕತ್ತರಿಸಿದ ದುಷ್ಕರ್ಮಿಗಳು

ರೈಲ್ವೇ ಗೇಟ್ ತೆಗೆಯಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆಯೊಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊರಾದಾಬಾದ್: ರೈಲ್ವೇ ಗೇಟ್ ತೆಗೆಯಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆಯೊಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಜೈಪ್ರಕಾಶ್ ಪಟೇಲ್ ಸಂತ್ರಸ್ತ ವ್ಯಕ್ತಿ. ಕಳೆದ ರಾತ್ರಿ ಪಟೇಲ್ ಅವರು ಭೋಜ್ಪುರ ರೈಲ್ವೆ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೈಲು ಬರುತ್ತಿರುವ ಸಂದೇಶ ಬಂದ ಹಿನ್ನಲೆಯಲ್ಲಿ ಪ್ರವೇಶ ದ್ವಾರವನ್ನು ಮುಚ್ಚಿದ್ದರು. ಈ ವೇಳೆ ಕೆಲ ಪ್ರಾಣಿಗಳೊಂದಿಗೆ ವಾಹನದಲ್ಲಿ ಗೇಟ್ ಬಳಿ ಬಂದಿರುವ ಮಾಂಸ ದಂಧೆಕೋರರು ಗೇಟ್ ತೆಗೆಯುವಂತೆ ತಿಳಿಸಿದ್ದಾರೆ.

ಸಿಗ್ನಲ್ ಇದ್ದು, ಸಿಗ್ನಲ್ ಗೂ ಮುನ್ನವೇ ಗೇಟ್ ತೆಗೆಯಲು ಸಾಧ್ಯವಿಲ್ಲ ಎಂದು ಪಟೇಲ್ ಅವರು ತಿಳಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಾಂಸ ದಂಧೋಕೋರರು ಚಾಕುವನ್ನು ತೆಗೆದುಕೊಂಡು ಪಟೇಲ್ ಅವರ ಕೈ ಬೆರಳುಗಳನ್ನು ಕತ್ತರಿಸಿ ರಾಕ್ಷಸ ವರ್ತನೆಯನ್ನು ಮರೆದಿದ್ದಾರೆ.

ಪ್ರಸ್ತುದ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com