ಉತ್ತರಪ್ರದೇಶ ಚುನಾವಣೆ ಬಳಿಕ ಹೊಸ ಪಕ್ಷ ಸ್ಥಾಪನೆ: ಶಿವಪಾಲ್ ಯಾದವ್

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಹೊಸ ಪಕ್ಷ ಸ್ಥಾಪಿಸುವುದಾಗಿ ಸಮಾಜವಾದಿ ಪಕ್ಷ(ಎಸ್ಪಿ)ದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸಹೋದರ..
ಶಿವಪಾಲ್ ಯಾದವ್
ಶಿವಪಾಲ್ ಯಾದವ್
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಹೊಸ ಪಕ್ಷ ಸ್ಥಾಪಿಸುವುದಾಗಿ ಸಮಾಜವಾದಿ ಪಕ್ಷ(ಎಸ್ಪಿ)ದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಹೇಳಿದ್ದಾರೆ. 
ಸಮಾಜವಾದಿ ಪಕ್ಷದಲ್ಲಿನ ಕುಟುಂಬ ಕಲಹಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಶಿವಪಾಲ್ ಯಾದವ್ ಅವರು ಮಾರ್ಚ್ 11 ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ಪಕ್ಷದ ಸ್ಥಾಪನೆಗೆ ಸಜ್ಜಾಗಿದ್ದಾರೆ. ಮುಲಾಯಂ ಸಿಂಗ್ ಅವರು ತಮ್ಮ ಪುತ್ರ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಶಪಡಿಸಿಕೊಂಡಿರುವ ಎಸ್ಪಿಯನ್ನು ಅಥವಾ ಸಹೋದರ ಸ್ಥಾಪಿಸಲಿರುವ ಹೊಸ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ತಿಳಿಯದಂತಾಗಿದೆ. 
ಶಿವಪಾಲ್ ಯಾದವ್ ಅವರು, ಸಮಾಜವಾದಿ ಪಕ್ಷದ ಸದಸ್ಯರೇ ನನ್ನ ಮತ್ತು ನೇತಾಜಿ(ಮುಲಾಯಂ)ಯವರ ವಿರುದ್ಧ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಅವರೆಲ್ಲಾ ಇವತ್ತು ಏನಾಗಿದ್ದಾರೋ ಅದಕ್ಕೆಲ್ಲಾ ಮುಲಾಯಂ ಆಶೀರ್ವಾದವೇ ಕಾರಣ ಎಂದು ಹೇಳುತ್ತಿದ್ದವರು ಇವತ್ತು ಅವರನ್ನೇ ಅವಮಾನಿಸುತ್ತಿದ್ದಾರೆ ಎಂದರು. 
ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಶಿವಪಾಲ್ ಯಾದವ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಪಕ್ಷದ ಸೈಕಲ್ ಚಿಹ್ನೆಯಡಿ ತನ್ನ ನಾಮಪತ್ರವನ್ನು ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com