ಕೋರಪುಟ್: ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ಬುಧವಾರ ನೆಲಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ ಕನಿಷ್ಠ ಐವರು ಪೊಲೀಸರ ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟದಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಒಡಿಶಾ ಸರ್ಕಾರ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇಂದು ಸಂಜೆ 5.20ರ ಸುಮಾರಿಗೆ ಒಡಿಶಾ ರಾಜ್ಯ ಶಸಸ್ತ್ರ ಪೊಲೀಸ್ ಪಡೆಯ 70 ಸಿಬ್ಬಂದಿಯನ್ನು ಅಂಗುಲ್ ಪೊಲೀಸ್ ತರಬೇತಿ ಕಾಲೇಜ್ ಗೆ ಕರೆದೊಯ್ಯುತ್ತಿದ್ದ ಮಿನಿ ಬಸ್ ಅನ್ನು ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.