ದೇವಿಯನ್ನು ಒಲಿಸಿಕೊಳ್ಳಲು ತನ್ನನ್ನೇ ಬಲಿದಾನ ನೀಡಿದ ವ್ಯಕ್ತಿ

ಶಕ್ತಿದೇವಿಯನ್ನು ಒಲಿಸಿಕೊಳ್ಳಲು 30 ವರ್ಷದ ವ್ಯಕ್ತಿಯೊಬ್ಬ ತನ್ನನ್ನೇ ಬಲಿದಾನ ಮಾಡಿಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಚಿನ್ನಮಸ್ತ ದೇವಾಲಯ
ಚಿನ್ನಮಸ್ತ ದೇವಾಲಯ
Updated on

ಪಾಟ್ನಾ: ಶಕ್ತಿದೇವಿಯನ್ನು ಒಲಿಸಿಕೊಳ್ಳಲು 30 ವರ್ಷದ ವ್ಯಕ್ತಿಯೊಬ್ಬ ತನ್ನನ್ನೇ ಬಲಿದಾನ ಮಾಡಿಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಬಿಹಾರ ಮೂಲದ ಸಂಜಯ್ ನಾಟ್ ರಾಂಚಿಯಿಂದ 70 ಕಿಮೀ ದೂರದಲ್ಲಿರುವ ಚಿನ್ನಮಸ್ತ ದೇವಾಲಯದಲ್ಲಿ ತನ್ನನ್ನೇ ಬಲಿ ನೀಡಿದ್ದಾನೆ.

ಮುಂಜಾನೆ ಸುಮಾರು 1 ಗಂಟೆ ಕಾಲ ಧ್ಯಾನ ಮಾಡಿದ ಸಂಜಯ್, ಭೈರವಿ ನದಿಯಲ್ಲಿ ಸ್ನಾನ ಮಾಡಿ, ಬೆಳಗ್ಗೆ ಆರು ಗಂಟೆಗೆ ಸ್ನಾನ ಮಾಡಿಸ ಪ್ರಾಣಿ ಬಲಿ ನೀಡು ಸ್ಥಳಕ್ಕೆ ಬಂದಿದ್ದಾನೆ.

ನಂತರ ತನ್ನ ಬ್ಯಾಗಿನಲ್ಲಿದ್ದ ಡ್ಯಾಗರ್ ನಿಂದ ಕತ್ತನ್ನು ಸೀಳಿಕೊಂಡಿದ್ದಾನೆ. ಈತನ ಈ ಕೆಲಸದಿಂದ ಅಲ್ಲಿ ನೆರದಿದ್ದವರೆಲ್ಲಾ ಆಘಾತಕ್ಕೊಳಗಾದರು ಎಂದು ದೇವಾಲಯ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದಾಗಿ ಆತ ಕೆಲ ನಿಮಿಷಗಳಲ್ಲೇ ಸಾವನ್ನಪ್ಪಿದ್ದಾನೆ. ಈ ಪ್ರಕರಣದಿಂದಾಗಿ ಶತಮಾನದಷ್ಟು ಹಳೆಯದಾದ ದೇವಾಲಯವನ್ನು ಮುಚ್ಚಲಾಯಿತು.
ಅಸ್ಸಾಂ ನ ಕಾಮಾಕ್ಯ ದೇವಾಲಯದ ನಂತರ ದೇಶದಲ್ಲೇ ಅತೀ ಪ್ರಸಿದ್ಧ 2ನೇ ಶಕ್ತಿ ಸ್ಥಳವಾಗಿದೆ.

ಕೂಡಲೇ ದೇವಾಲಯಕ್ಕೆ ಆಗಮಿಸಿದ ಪೊಲೀಸರು, ಆತನ ಬ್ಯಾಗಿನಲ್ಲಿದ್ದ  ಕಾಗದಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆತ ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಆತನ ತಂದೆ ಸಿಆರ್ ಪಿಎಫ್ ನಲ್ಲಿ ಪೇದೆಯಾಗಿದ್ದಾರೆ. ಶವವನ್ನು ಮರೋಣತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಸಂಜಯ್ ನ್ಯಾಟ್ ಕೆಲ ವರ್ಷಗಳಿಂದ ತಾಂತ್ರಿಕ ಆಚರಣೆಗಳನ್ನು ಮಾಡುತ್ತಿದ್ದ,  ತನ್ನ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ದೇವಿಗೆ ತನ್ನನ್ನೇ ಬಲಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಚಿನ್ನಮಸ್ತ ದೇವಾಲಯದಲ್ಲಿ ತಲೆಯಿಲ್ಲದ ದೇವತೆ ಒಂದು ಕೈಯ್ಯಲ್ಲಿ ಕತ್ತಿ ಮತ್ತೊಂದು ಕೈಯ್ಯಲ್ಲಿ ತನ್ನ ಕತ್ತರಿಸಿದ ತಲೆ ಹಿಡಿದುಕೊಂಡಿದೆ. ಇಲ್ಲಿ ಪ್ರಾಣಿ ಬಲಿ ಸರ್ವೇ ಸಾಮಾನ್ಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com