ಆರೋಪ ಮಾಡುವುದರಲ್ಲಿ ಬಿಜೆಪಿ ನಾಯಕರು ನಿಪುಣರು: ಕಾಂಗ್ರೆಸ್

ಯುಪಿಎ ಅಧಿಕಾರಾವಧಿಯಲ್ಲಿಯೇ ಹಿಂಸಾಚಾರ ಪ್ರಕರಣಗಳು ಹೆಚ್ಚಿದ್ದವು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಗೆ ಕಾಂಗ್ರೆಸ್ ಭಾನುವಾರ ತೀವ್ರವಾಗಿ ಕಿಡಿಕಾರಿದೆ...
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ನಿಂಘ್ವಿ,
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ನಿಂಘ್ವಿ,
Updated on
ನವದೆಹಲಿ: ಯುಪಿಎ ಅಧಿಕಾರಾವಧಿಯಲ್ಲಿಯೇ ಹಿಂಸಾಚಾರ ಪ್ರಕರಣಗಳು ಹೆಚ್ಚಿದ್ದವು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಗೆ ಕಾಂಗ್ರೆಸ್ ಭಾನುವಾರ ತೀವ್ರವಾಗಿ ಕಿಡಿಕಾರಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ನಿಂಘ್ವಿ, ಹತ್ಯೆ ಪ್ರಕರಣಗಳ ಸಂಬಂಧ ಬಿಜೆಪಿ ಕೆಸರೆಚಾಟ ಆಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಹತ್ಯೆ ಪ್ರಕರಣಗಳಲ್ಲಿ ಸ್ಪರ್ಧಾತ್ಮಕ ಪರಿಕಲ್ಪನೆ ಸರಿಯಲ್ಲ. 2011-13ರ ಯುಪಿಎ ಅಧಿಕಾರಾವಧಿಯಲ್ಲಿಯೇ ಹಿಂಸಾಚಾರ ಪ್ರಕರಣಗಳು ನಡೆಸಿತ್ತು ಎಂಬ ಮಾತುಗಳು ಸರಿಯಲ್ಲ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 
ಹಿಂಸಾಚಾರ ಪ್ರಕರಣಗಳು 70 ವರ್ಷಗಳ ನಮ್ಮ ಅಧಿಕಾರಾವಧಿಯಲ್ಲಿ ನಡೆದಿರಲಿಲ್ಲ. ಆದರೆ, ಗೋರಕ್ಷಣೆ ಹೆಸರಿನಲ್ಲಿ ಮಾನವ ಹತ್ಯೆ ಮೂರು ವರ್ಷಗಳಿಂದ ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com