ಕೊವಲಂ ಬೀಚ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳ ಸಾವು

ಶನಿವಾರ ನಡೆದ ಎರಡು ಪ್ರತ್ಯೇಕ ದುರಂತಗಳಲ್ಲಿ ಕೊವಲಂ ಬೀಚ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ....
ಕೊವಲಂ ಬೀಚ್ ನಲ್ಲಿ ಶವಕ್ಕಾಗಿ ಹೆಲಿಕಾಪ್ಟರ್ ನಿಂದ ಶೋಧ
ಕೊವಲಂ ಬೀಚ್ ನಲ್ಲಿ ಶವಕ್ಕಾಗಿ ಹೆಲಿಕಾಪ್ಟರ್ ನಿಂದ ಶೋಧ
ಚೆನ್ನೈ: ಶನಿವಾರ ನಡೆದ ಎರಡು ಪ್ರತ್ಯೇಕ ದುರಂತಗಳಲ್ಲಿ ಕೊವಲಂ ಬೀಚ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿ ಪೃಥ್ವಿರಾಜ್(29), ಸ್ನಾನ ಮಾಡಲೆಂದು ತನ್ನ ಇಬ್ಬರು ಸ್ನೇಹಿತರ ಜೊತೆ ಸಮುದ್ರಕ್ಕೆ ತೆರಳಿದ್ದಾನೆ. ಮೂವರು ಸ್ನಾನ ಮಾಡುತ್ತಿದ್ದ ವೇಳೆ ಪೃಥ್ವಿರಾಜ್ ನೀರಿನಲ್ಲಿ ಮುಳುಗಿದ್ದಾನೆ, ಕೂಡಲೇ ಆತನ ಸ್ನೇಹಿತರು ಹುಡುಕಿದಾಗ ಆತ ಎಲ್ಲಿಯೂ ಕಾಣಲಿಲ್ಲ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಮೀನುಗಾರರು ಶವವನ್ನು ಹುಡುಕಿದರೂ ಪ್ರಯೋಜನವಾಗಲಿಲ್ಲ.
ಭಾನುವಾರ ಬೆಳಗ್ಗೆ ಘಟನೆ ನಡೆದ 7 ಕಿಮೀ ದೂರದ ಉತ್ತಂಡಿಯಲ್ಲಿ ಶವ ತೇಲಿಬಂದಿದ್ದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಅದೇ ಸಂಜೆ ಮತ್ತಿಬ್ಬರು ಎಂಜಿನೀಯರಿಂಗ್ ವಿದ್ಯಾರ್ಥಿಗಳು ಕೊವಲಂ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಒಎಂಆರ್ ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳಾದ ಹೆನ್ರಿ ಜೋಸೆಫ್ ಮತ್ತು ರಾಕೇಶ್ ಸಮುದ್ರದಲ್ಲಿ ಮುಳುಗಿ ಸಾನಪ್ಪಿದ್ದಾರೆ. ಇಬ್ಬರು ಆಂಧ್ರ ಪ್ರದೇಶದವರಾಗಿದ್ದಾರೆ.
ಸತ್ಯಭಾಮಾ ಯೂನಿವರ್ಸಿಟಿಯ ಎರಡನೇ ವರ್ಷದ ಬಿ.ಟೆಕ್ ನ 8 ವಿದ್ಯಾರ್ಥಿಗಳು ಮಸೀದಿ ಹಿಂದಿನ ಬೀಚ್ ನಲ್ಲಿ ಆಟವಾಡಲು ತೆರಳಿದ್ದಾರೆ, ಸಂಜೆ 7 ಗಂಟೆ ವೇಳೆಗೆ ಆರು ವಿದ್ಯಾರ್ಥಿಗಳು ವಾಪಸಾಗಿದ್ದು, ಇಬ್ಬರು ನಾಪತ್ತೆಯಾಗಿದ್ದರು. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕನತ್ತೂರ್ ಬಳಿ ಜೊಸೆಫ್ ಶವ ಪತ್ತೆಯಾಗಿದ್ದು, ಮತ್ತೊಬ್ಬ ವಿದ್ಯಾರ್ಥಿಯ ಶವ ಸಮುದ್ರದಲ್ಲಿ ಮುಳುಗಿ ಹೋಗಿದೆಯೆಂದು ಶಂಕಿಸಲಾಗಿದೆ.ಕೊವಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com