ಸೇನಾ ಬಂಕರ್ ನೆಲಸಮ ಮಾಡಲು ಚೀನಾ ಬುಲ್ಡೋಜರ್ ಬಳಕೆ ಮಾಡಿಲ್ಲ: ಭಾರತ

ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಬುಲ್ಡೋಜರ್ ಬಳಸಿ ತೆರವುಗೊಳಿಸಲಾಗಿದೆ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ.
ಭಾರತೀಯ ಸೇನೆ
ಭಾರತೀಯ ಸೇನೆ
ನವದೆಹಲಿ: ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಬುಲ್ಡೋಜರ್ ಬಳಸಿ ತೆರವುಗೊಳಿಸಲಾಗಿದೆ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ. 
ಚೀನಾ ಸೇನೆ ಬಂಕರ್ ಗಳನ್ನು ನೆಲಸಮಗೊಳಿಸುವುದಕ್ಕೆ ಬುಲ್ಡೋಜರ್ ಗಳನ್ನು ಬಳಕೆ ಮಾಡಿಕೊಂಡಿಲ್ಲ ಎಂದು ಭಾರತ ಹೇಳಿಕೆ ನೀಡಿದೆ. ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದ್ದು, ಚೀನಾ ಭಾರತದ ಬಂಕರ್ ಗಳನ್ನು ತೆರವುಗೊಳಿಸುವುದಕ್ಕೆ ಬುಲ್ಡೋಜರ್ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ವರದಿಯನ್ನು ಭಾರತೀಯ ಸೇನೆಯ ವಕ್ತಾರರು ತಿರಸ್ಕರಿಸಿದ್ದು, ಬುಲ್ಡೋಜರ್ ಗಳನ್ನು ಬಳಕೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. 
ಚಿನಾ-ಭಾರತದ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿಲ್ಲ. ನಮ್ಮ ನಡುವಿನ ಸಂಬಂಧಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಭಾರತೀಯ ಸೇನಾ ವಕ್ತಾರರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com